ದುಬಾರೆಯಲ್ಲಿ ನೀರಿಗೆ ಮುಳುಗಿ ಯುವಕ ಸಾವು!

ಕುಶಾಲನಗರ ಸಮೀಪದ ಪ್ರಸಿದ್ಧ ಪ್ರವಾಸಿ ತಾಣ ದುಬಾರೆಯ ಕಾವೇರಿ ನದಿಯಲ್ಲಿ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿವಾಸಿಯಾಗಿರುವ ಅನಿಕೇತ್ ದಾದಾಜಿ ಮಹಾಜನ್ (16) ಮೃತಪಟ್ಟ ಯುವಕನಾಗಿದ್ದು, ಮಹಾರಾಷ್ಟ್ರದಿಂದ ಮಂಗಳೂರಿಗೆ ರೈಲಿನ ಮೂಲಕ ಆಗಮಿಸಿದ್ದ ಕುಟುಂಬಸ್ಥರು,ಕೊಡಗಿನ ವಿವಿಧೆಡೆ ಪ್ರವಾಸ ಮುಗಿಸಿ ದುಬಾರೆಗೆ ಆಗಮಿಸಿದ್ದು ದುರ್ಘಟನೆ ನಂತರ ಸ್ಥಳೀಯ ರಾಫ್ಟಿಂಗ್ ತಂಡದ ಯುವಕರಾದ ಕೋಟುಮಾಡ ಪವನ್ ಮತ್ತು ತಂಡ ರಕ್ಷಿಸುವ ಕಾರ್ಯಕ್ಕೆ ಮುಂದಾಗಿದ್ದು, ದುರದೃಷ್ಟವಷಾತ್ ಯುವಕ ಸಾವನ್ನಪ್ಪಿದ್ದಾನೆ. ಕಾಲುಜಾರಿ ನದಿಗೆ ಬಿದ್ದ ಪ್ರಕರಣ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.