ದುಬಾರೆಯಲ್ಲಿ ಗಣಪನ ರೂಪ ಗಜನಿಗೆ ವಿಶೇಷ ಪೂಜೆ

ಕೃಪೆ: ಕೋಟುಮಾಡ ಪವನ್
ಗಣೇಶ ಚತುರ್ಥಿ ಹಬ್ಬದ ಹಿನ್ನಲೆಯಲ್ಲಿ ಕೊಡಗಿನ ಕುಶಾಲನಗರ ತಾಲ್ಲೂಕಿನ ದುಬಾರೆ ಸಾಕಾನೆ ಶಿಬಿರದಲ್ಲಿ ವಿಭಿನ್ನವಾಗಿ ಹಬ್ಬ ಆಚರಿಸಲಾಯಿತು.

ಬೆಳಗ್ಗೆ ಸಾಕಾಧಮನೆಗಳಿಗೆ ಕಾವೇರಿ ನದಿಯಲ್ಲಿ ಮಜ್ಜೆ ಮಾಡಿಸಿ,ಪ್ರತಿನಿತ್ಯ ಆನೆಗಳಿಗೆ ಶಕ್ತಿ ತುಂಬುವ ವಿನಾಯಕನ ಗುಡಿ ಸುತ್ತ ಕ್ಯಾಂಪಿನ ಎಲ್ಲಾ ಆನೆಗಳನ್ನು ಒಟ್ಟು ಸೇರಿಸಿ,ಆನೆಗಳಿಗೆ ವಿಭೂತಿ ಹಚ್ಚಿ ಸೇವಂತಿಗೆ ಹೂವಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
ಬಹುತೇಕ ಹಿರಿಯ ಆನೆಗಳು ನಾಡ ಹಬ್ಬ ದಸರಾಕ್ಕೆಂದು ಮೈಸೂರಿಗೆ ತೆರಳಿದ್ದು, ಅಲ್ಲಿಯೂ ಕ್ಯಾಂಪಿನ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ.