ದುಬಾರೆಯಲ್ಲಿ ಆನೆಗಳಿಗೆ ವೈದಕೀಯ ತಪಾಸಣೆ: 13 ಕಾಡಾನೆಗಳಿಗೆ ರೆಡಿಯೋ ಕಾಲರ್

ಸುದ್ದಿ ಸಂತೆ ಸೂಪರ್ Exclusive News

ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳಿಗೆ ವೈದಕೀಯ ತಪಾಸಣೆ ನಡೆಸಲಾಯಿತು.
ದಸರಾ ಆನೆಗಳು ಸೇರಿದಂತೆ ಕ್ಯಾಂಪಿನ ಒಟ್ಟು 31 ಆನಗಳಿಗೆ ತಜ್ಞರು ವೈದಕೀಯ ತಪಾಸಣೆ ಯನ್ನು ವೈಲ್ಡ್ ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಡೆಹರಡೂನ್ ಮತ್ತ್ತು ಜರ್ಮನಿ ಪಶು ವೈದಕೀಯ ತಂಡ ರಾಜ್ಯ ಅರಣ್ಯ ಇಲಾಖೆ ಜೊತೆಗೂಡಿ
ರಕ್ತದ ಮಾದರಿ, ಸ್ವ್ಯಾಬ್ ಟೆಸ್ಟ್ ಮಾದರಿಯನ್ನು ಪಡೆಯಲಾಯಿತು.ಮಳೆಗಾಲದಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆ ಆನೆಗಳಿಗೆ ನಡೆಸುವ ಸಹಜ,ಪ್ರಕ್ರಿಯೆ ಇದಾಗಿದೆ.

ರೆಡಿಯೋ ಕಾಲರ್ ಅಳವಡಿಕೆ

ಕೊಡಗಿನ ವಿರಾಜಪೇಟೆ, ಸೋಮವಾರಪೇಟೆ, ಹಾಸನದ ಕಾಡಾನೆಗಳಿಗೆ ರೆಡಿಯೋ ಕಾಲರ್ ಅಳವಡಿಕೆ ಪ್ರಕ್ರಿಯೆ ನಡೆಸಲಾಗಿದ್ದು, ಈವರೆಗೆ ಒಟ್ಟು 13 ಆನೆಗಳಿಗೆ ರೆಡಿಯೋ ಕಾಲರ್ ಅಳವಡಿಕೆ ಮಾಡಲಾಗಿದೆ. ಆನೆಗಳಿಂದ ಆಗುವ ಅನಾಹುತ ಮತ್ತು ಅವುಗಳ ಚಲನವಲನ ಗಮನಿಸಲಾಗುತ್ತಿದೆ ಎಂದು ತಜ್ಞರು ಈ ಸ‌ಂದರ್ಭ ತಿಳಿಸಿದ್ದಾರೆ.

error: Content is protected !!