fbpx

ದುಡ್ಡು, ಕಾರು ಹಾಕಿಕೊಂಡು ವಿಮಾನದಲ್ಲಿ ಎಸ್ಕೇಪ್ ಆದ ಅಫ್ಘಾನಿಸ್ಥಾನದ ಅಧ್ಯಕ್ಷ ಅಶ್ರಫ್ ಘನಿ

ಕಾಬೂಲ್: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಗೆ ಉಗ್ರರು ಲಗ್ಗೆಯಿಟ್ಟ ಸಂದರ್ಭದಲ್ಲಿ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ನಾಲ್ಕು ಕಾರುಗಳು ಮತ್ತು ಹೆಲಿಕಾಪ್ಟರ್ ನಲ್ಲಿ ದುಡ್ಡು ತುಂಬಿಕೊಂಡು ದೇಶದಿಂದ ಪಲಾಯನ ಮಾಡಿದ್ದಾರೆ. ಭಾರಿ ಪ್ರಮಾಣದ ದುಡ್ಡು ತೆಗೆದುಕೊಂಡು ಹೋಗಲು ಜಾಗವಿಲ್ಲದೆ ಸ್ವಲ್ಪ ದುಡ್ಡು ಬಿಟ್ಟು ಹೋಗಿದ್ದಾರೆ ಎಂದು ರಷ್ಯಾ ಹೇಳಿದೆ.

4 ಕಾರು ಮತ್ತು ಒಂದು ಹೆಲಿಕಾಪ್ಟರ್ ನಲ್ಲಿ ಹಣ ತುಂಬಿಕೊಂಡು ಅಶ್ರಫ್ ಘನಿ ದೇಶವನ್ನು ತೊರೆದಿದ್ದಾರೆ. ತಾಲಿಬಾನ್ ಉಗ್ರರು ರಾಜಧಾನಿಗೆ ಲಗ್ಗೆಯಿಟ್ಟ ವೇಳೆ ಅವರು ಹಣ ತುಂಬಿಕೊಂಡು ಹೋಗಿದ್ದು, ಜಾಗವಿಲ್ಲದ ಕಾರಣ ಒಂದಿಷ್ಟು ಹಣ ರಸ್ತೆಯಲ್ಲಿ ಚೆಲ್ಲಿದೆ ಎಂದು ಕಾಬೂಲ್‌ ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ವಕ್ತಾರ ನಿಕಿತಾ ಇಶ್ಚೆಂಕೊ ಹೇಳಿದ್ದಾರೆ.

error: Content is protected !!