ದಾಳಿ ಮಾಡುತ್ತಿರುವ ಹುಲಿ ಗುರುತು ಪತ್ತೆ:ಕೂಂಬಿಂಗ್ ಸ್ಥಗಿತ

ಕೊಡಗು:ನಿರಂತರ ದಾಳಿ ಮಾಡುತ್ತಿರುವ ಹುಲಿ ನಾಗರಹೊಳೆ ಅಭಯಾರಣ್ಯಕ್ಕೆ ಸೇರಿದ್ದಾಗಿದೆ ಎಂದು ತಜ್ಞರು ಖಚಿತಪಡೆಸಿದ್ದಾರೆ. 2013ರಲ್ಲಿ ನಡೆದ ಹುಲಿ ಗಣತಿ ವೇಳೆ ಕ್ಯಾಮರಾದಲ್ಲಿ ಸೆರೆಯಾಗಿದ್ದ ಹುಲಿಯೇ ಈ ದಾಳಿ ಮಾಡುತ್ತಿದೆ.2013ರಲ್ಲಿ ನಾಗರಹೊಳೆಯ ಕಲ್ಲಳ್ಳದಲ್ಲಿ ಅಳವಡಿಸಿದ್ದ ಕ್ಯಾಮರಾಕ್ಕೆ ಸೆರೆಯಾಗಿರುವ ಹುಲಿ ,ಇತ್ತೀಚೆಗೆ ಬೆಳ್ಳೂರಿನಲ್ಲಿ ನಂಜಪ್ಪ ಎಂಬುವವರ ಹಸು ಮೇಲೆ ದಾಳಿ ಮಾಡಿದ ಹುಲಿಗೆ ಸಾಮ್ಯತೆಯಿದೆ.ಹುಲಿಗೆ ಅಂದಾಜು 10 ವರ್ಷಗಳಾಗಿದ್ದು ಬೆಳ್ಳೂರು,ಟಿ.ಶೆಟ್ಟಿಗೇರಿ,ಹರಿಹರ ಮತ್ತು ಕುಮಟೂರಿನಲ್ಲಿ ದಾಳಿ ಮಾಡಿದ್ದು ಇದೇ ಹುಲಿ ಎಂದು ಹುಲಿ ತಜ್ಞರು ಖಾತ್ರಿ ಮಾಡಿದ್ದಾರೆ.

ಕೂಂಬಿಂಗ್ ಸ್ಥಗಿತ: ಕಳೆದ 12 ದಿನಗಳಿಂದ ಹುಲಿ ಸೆರೆಗೆ ಕೂಂಬಿಂಗ್ ನಡೆಸುತ್ತಿದ್ದರೂ ಪತ್ತೆಯಾಗದ ಕಾರಣ ಜಾನುವಾರುಗಳ ಮೃತದೇಹ ತಿನ್ನಲು ಬರುವ ಹುಲಿಗೆ ಅಡ್ಡಿ ಉಂಟಾಗುತ್ತಿದ್ದು,ಈ ಹಿನ್ನಲೆಯಲ್ಲಿ 150 ಮಂದಿ ಸಿಬ್ಬಂಧಿ ಒಳಗೊಂಡು ನಡೆಸುತ್ತಿದ್ದ ಕೂಂಬಿಂಗ್ ಸ್ಥಗಿತಗೊಳಿ ಅಟ್ಟಣಿಗೆಯಲ್ಲಿ ಕುಳಿತು ಕಂಡು ಬಂದಲ್ಲಿ ಅರವಳಿಕೆ ನೀಡಿ ಸೆರೆ ಹಿಡಿಯಲು ನಿರ್ಧರಿಸಲಾಗಿದೆ.

error: Content is protected !!