fbpx

ದಾಖಲೆ ಬರೆದ ಹಾಡು!

ಧನುಷ್ ಹಾಗೂ ಸಾಯಿ ಪಲ್ಲವಿ ಅಭಿನಯದ ಮಾರಿ 2 ಸಿನಿಮಾದ ರೌಡಿ ಬೇಬಿ ಹಾಡನ್ನು ಕೇಳದವರಿಲ್ಲ. ಈ ಹಾಡು ಸೂಪರ್ ಹಿಟ್ ಆಗುವ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಡಬ್ ಸ್ಮ್ಯಾಶ್ ಮಾಡುವವರಂತು ಈ ಹಾಡನ್ನು ಸಾಕಷ್ಟು ಬಳಸಿದ್ದಾರೆ. ಇದೀಗ ಈ ಹಾಡು ಯೂಟ್ಯೂಬ್ ನಲ್ಲಿ 1 ಬಿಲಿಯನ್ ವೀಕ್ಷಣೆ ಪಡೆಯುವ ಮೂಲಕ 1 ಬಿಲಿಯನ್ ವೀವ್ಸ್ ಪಡೆದ ದಕ್ಷಿಣ ಭಾರತದ ಮೊದಲ ಹಾಡು ಎಂಬ ಹೊಸ ದಾಖಲೆ ಸೃಷ್ಟಿಸಿದೆ.

2018 ರಂದು ಬಾಲಾಜಿ ಮೋಹನ್ ಡೈರೆಕ್ಷನ್ ನಲ್ಲಿ ಚಿತ್ರ ಮೂಡಿಬಂದಿತ್ತು. ಧನುಷ್ ಜೊತೆ ಸಾಯಿಪಲ್ಲವಿ ಈ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದರು 1 ಬಿಲಿಯನ್ ವೀವ್ಸ್ ಪಡೆದ ಈ ಸಂತಸವನ್ನು ಧನುಷ್ ಹಾಗೂ ಸಾಯಿ ಪಲ್ಲವಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

error: Content is protected !!