ದಸರಾ ಸಮಿತಿಯ ಲೋಗೋ ಬಿಡುಗಡೆ

ಗೋಣಿಕೊಪ್ಪ: 44ನೇ ವರ್ಷದ ಗೋಣಿಕೊಪ್ಪ ದಸರಾ ಉತ್ಸವದ ಅಂಗವಾಗಿ ಮಡಿಕೇರಿ ಜಿಲ್ಲಾ ಪಂಚಾಯಿತ್ ಸಭಾಂಗಣದಲ್ಲಿ ದಿನಾಂಕ 16 ಸಪ್ಟೆಂಬರ್ 2022ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ಗೋಣಿಕೊಪ್ಪ ದಸರಾ ಸಮಿತಿಯ ಲೋಗೋ ಬಿಡುಗಡೆ ಮಾಡಲಾಯಿತು.

ಕೊಡಗು ಉಸ್ತುವಾರಿ ಸಚಿವ ಬಿಸಿ ನಾಗೇಶ್,ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜೆ ಬೋಪಯ್ಯ, ಸುಜಾ ಕುಶಾಲಪ್ಪ ಅವರಿಂದ ಲೋಗೋ ಬಿಡುಗಡೆ ಮಾಡಿದರು. ಈ ಸಂದರ್ಭ ದಸರಾ ಸಮಿತಿ ಅಧ್ಯಕ್ಷರಾದ ಬಿ.ನ್ ಪ್ರಕಾಶ್, ಕಾರ್ಯಾಧ್ಯಕ್ಷರಾದ ಸಿ.ಕೆ ಬೋಪಣ್ಣ ಉಪಸ್ಥಿತರಿದ್ದರು.