ದಸರಾ ಜನೋತ್ಸವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಮಾಡುವಂತೆ ಕೊಡಗು ಹಿತರಕ್ಷಣಾ ವೇದಿಕೆ ಒತ್ತಾಯ

ಮಡಿಕೇರಿಯ ಐತಿಹಾಸಿಕ ದಸರಾಕ್ಕೆ ಮಡಿಕೇರಿ ನಗರ ಸಜ್ಜಾಗುತ್ತಿದು ದಸರಾ ಜನೋತ್ಸವಕ್ಕೆ ಜಿಲ್ಲೆಯ ಹಾಗೂ ಹೊರರಾಜ್ಯದ ಜನರು ಬರುವುದರಿಂದ ಮಡಿಕೇರಿಯ ಗಾಂಧಿ ಮೈದಾನ ಹಾಗೂ ಟೋಲ್ ಗೇಟ್ ಬಳಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ತಾತ್ಕಾಲಿಕ ಶೌಚಾಲಯದ ವ್ಯವಸ್ಥೆ ಗಳನ್ನು ಮಾಡಿಕೊಡಬೇಕು ಮಡಿಕೇರಿ ನಗರದಲ್ಲಿ ನಗರಸಭೆ ವರಣದಲ್ಲಿ ಬಿಟ್ಟರೆ ಬೇರೆ ಎಲ್ಲಿಯೂ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಇರುವುದಿಲ್ಲ ದಸರಾ ಜನೋತ್ಸವ ಹಾಗೂ ದಸರಾ ಶೋಭಾಯಾತ್ರೆ ಸಂದರ್ಭದಲ್ಲಿ ದಸರಾವನ್ನು ವೀಕ್ಷಿಸಲು ಬರುವ ಮಕ್ಕಳು ಹಾಗೂ ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆಯಿಲ್ಲದೆ ಗಾಂಧಿ ಮೈದಾನದಿಂದ ಶೌಚಾಲಯವನ್ನು ಹುಡುಕಿಕೊಂಡು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಹೋಗುತ್ತಿರುವ ನಿದರ್ಶನಗಳು ಹಲವು ವರ್ಷಗಳಿಂದ ಕಂಡುಬರುತ್ತಿದೆ ಆದುದರಿಂದ ದಸರಾ ಜನೋತ್ಸವ ಸಮಿತಿ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಡಿಕೇರಿ ನಗರ ಸಭೆ ವತಿಯಿಂದ ಜನೋತ್ಸವ ನಡೆಯುವ ಗಾಂಧಿ ಮೈದಾನ ಹಾಗೂ ಕೆಲವು ಭಾಗಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮೊಬೈಲ್ ಶೌಚಾಲಯಗಳ ವ್ಯವಸ್ಥೆಗಳನ್ನು ಮಾಡಿ ಕೊಡುವಂತೆ ಕೊಡಗು ಹಿತರಕ್ಷಣಾ ವೇದಿಕೆ ಹಾಗೂ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸಂಬಂಧಪಟ್ಟವರಲ್ಲಿ ಒತ್ತಾಯ ಮಾಡಿದೆ.

error: Content is protected !!