ದಶಕಗಳ ಕನಸಿಗೆ ಇಂದು ಅಧಿಕೃತ ಘೋಷಣೆಯ ಭಾಗ್ಯ

ಕಂದಾಯ ಸಚಿವರಾದ ಆರ್.ಅಶೋಕ್ ಅವರಿಂದ ಕುಶಾಲನಗರ ತಾಲ್ಲೂಕು ಉದ್ಘಾಟನೆ!

ಎರಡು ದಶಕಗಳ ಸುದೀರ್ಘವಾದ ಹೋರಾಟ ಕಾವೇರಿ ತಾಲ್ಲೂಕು ಹೋರಾಟ ಸಮಿತಿಯಿಂದ ಮಾಜಿ ಮುಖ್ಯ ಮಂತ್ರಿ ಆರ್.ಗುಂಡೂರಾವ್ ರವರ ಕನಸಿನ ಕೂಸು ಕುಶಾಲನಗರ ತಾಲ್ಲೂಕು ಆಗಬೇಕು ಎಂದು 1990 ನೇ ಇಸವಿಯಲ್ಲಿ  ಕುಶಾಲನಗರ ಪ್ರತ್ಯೇಕ ತಾಲ್ಲೂಕು ಘೋಷಣೆ ಮಾಡಬೇಕು ಎಂದು ಹೋರಾಟದ ಕಿಚ್ಚು ಆರಂಭಗೊಂಡಿತು. ಊರಿನ ಪ್ರಮುಖರು.ಜಿಲ್ಲಾ ಪಂಚಾಯತಿ ಅಧ್ಯಕ್ಷರು ಸದಸ್ಯರು. ತಾಲ್ಲೂಕು ಪಂಚಾಯತಿ ಅಧ್ಯಕ್ಷರು ಸದಸ್ಯರು. ಊರಿನ ಎಲ್ಲಾ ನಾಗರಿಕರು ಪಕ್ಷ ಭೇದ ಮರೆತು ಹೋರಾಟಕ್ಕೆ ಬೆಂಬಲ ಸೂಚಿಸಿದರು ಹಂತ ಹಂತವಾಗಿ ಪ್ರತಿಭಟನೆ, ಉಪವಾಸ ಸತ್ಯಾಗ್ರಹ, ರಸ್ತೆ ತಡೆ, ಬಂದ್ ನಡೆಸಲಾಯಿತು.

ಹಲವು ಬಾರಿ ರಾಜಧಾನಿಗೆ ನಿಯೋಗ ಈ ರೀತಿಯಲ್ಲಿ ನಿರಂತರವಾದ ಹೋರಾಟದ ಮೂಲಕ ಕುಶಾಲನಗರ ತಾಲ್ಲೂಕು ಕನಸು ನೆನೆಸಾಗಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ಅಂದಿನ ಮುಖ್ಯ ಮಂತ್ರಿ‌ ಹೆಚ್.ಡಿ.ಕುಮಾರಸ್ವಾಮಿ  ಕುಶಾಲನಗರಕ್ಕೆ  ಕಾರ್ಯಕ್ರಮಕ್ಕೆ ಬಂದಂತಹ  ಸಂದರ್ಭದಲ್ಲಿ ವೇದಿಕೆಯಲ್ಲಿ ಕುಶಾಲನಗರ ತಾಲ್ಲೂಕು ಘೋಷಿಸಿದರು.ಆದರೇ ತಾಂತ್ರಿಕ ಸಮಸ್ಯೆಗಳಿಂದ ಅಧಿಕೃತವಾಗಿ ಚಾಲಾನೆಗೆ ಬಂದಿರಲಿಲ್ಲ .

ನಂತರ 2020 ಇಸವಿಯ ಅಂತ್ಯದಲ್ಲಿ ರಾಜ್ಯ ಸರ್ಕಾರ ಅಧಿಕೃತ  ಅಧಿ‌ ಸೂಚನೆಯನ್ನು ಹೊರಡಿಸಿತು ತಾಲ್ಲೂಕಿಗೆ ಪ್ರತ್ಯೇಕ ತಹಶಿಲ್ದಾರ್ ನೇಮಕ ಮಾಡಲಾಯಿತು ‌.ನಂತರ ಮೂಲ ಸೌಲಭ್ಯಗಳ ಪ್ರಕ್ರಿಯೆ ಸ್ಥಗಿತಗೊಂಡಿತು. ತಹಶಿಲ್ದಾರ್ ಕಚೇರಿ ಸಿಬ್ಬಂದಿಗಳ ನೇಮಕ ತಟಸ್ಥಗೊಂಡು.ತಾಲ್ಲೂಕು ಅಧಿಕೃತವಾಗಿ ಕಾರ್ಯಚರಿಸಲು  ಹಿನ್ನಡೆ ಕಂಡಿತು.ಇಂದು ಕಂದಾಯ ಸಚಿವರಾದ ಆರ್ ಅಶೋಕ್ ಕುಶಾಲನಗರಕ್ಕೆ ಆಗಮಿಸಿ ಅಧಿಕೃತವಾಗಿ ಕುಶಾಲನಗರ ತಾಲ್ಲೂಕು ಕಾರ್ಯಾರಂಭಕ್ಕೆ ಚಾಲನೆಯನ್ನು ನೀಡಿ ದಶಕಗಳ ಕುಶಾಲನಗರ ತಾಲ್ಲೂಕು ಕನಸು ನೆನಸು ಮಾಡಿದ್ದಾರೆ.ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಟ್ಟಡದಲ್ಲಿ ತಾಲ್ಲೂಕು ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ ಕಾವೇರಿ ತಾಯಿ ಮಡಿಲು ನನಗೆ ಬಹಳ ಹಚ್ಚು ಮೆಚ್ಚು.ಕೊಡಗಿನ ಪ್ರಕೃತಿ ನನಗೆ ಜೀವ ಇಂತಹ ಕೊಡಗಿನ ವಾಣಿಜ್ಯ ನಗರಿ ಕುಶಾಲನಗರವನ್ನು ತಾಲ್ಲೂಕು ಆಗಿ ಘೋಷಿಸಿಸಲು ನನಗೆ ಬಹಳ ಸಂತೋಷವಾಗುತ್ತಿದೆ.ಮಡಿಕೇರಿ ಕ್ಷೇತ್ರದ ಶಾಸಕರಾದ ಅಪ್ಪಚ್ಚು  ರಂಜನ್ ಪ್ರಯತ್ನದಿಂದ ಕುಶಾಲನಗರ ತಾಲ್ಲೂಕು ಆಗಿ ಪರಿವರ್ತನೆಯಾಗಿದೆ.

ಸುಮಾರು 50 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದು ಮುಂದಿನ ದಿನಗಳಲ್ಲಿ ತಾಲ್ಲೂಕು ಅಭಿವೃದ್ಧಿ ಗಾಗಿ ಹಂತ ಹಂತವಾಗಿ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.ಮಡಿಕೇರಿ ಶಾಸಕ ರಂಜನ್ ಮಾತನಾಡಿ .ಕುಶಾಲನಗರದಲ್ಲಿ ಮಿನಿ‌ ವಿಧಾನ ಸೌಧ ನಿರ್ಮಿಸಲು ತಾವುಗಳು ಮುತುವರ್ಜಿ ವಹಿಸಬೇಕು ಎಂದು ಮನವಿ ಮಾಡಿದರು .ವೇದಿಕೆಯಲ್ಲಿ ಕೊಡಗು ಮೈಸೂರು ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ.ವಿಧಾನ ಪರಿಷತ್ತು ಸದಸ್ಯರಾದ ವೀಣಾ ಅಚ್ಚಯ್ಯ.ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಜಯವರ್ಧನ್. ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್.ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಕಾಂದೂ.ಸೋಮವಾರಪೇಟೆ ತಾಲ್ಲೂಕು ತಹಶಿಲ್ದಾರ್ ಆರ್.ಗೋವಿಂದ್ ರಾಜ್.ಕುಶಾಲನಗರ ತಾಲ್ಲೂಕು ತಹಶಿಲ್ದಾರ್ ಬಿ.ಎಂ.ಪ್ರಕಾಶ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಾರ್ಥನೆ ಭಾರತಿ ಮಾಡಿದರು ಸ್ವಾಗತ ಸೋಮವಾರಪೇಟೆ ಶಿಕ್ಷಣ ಅಧಿಕಾರಿ ಪಾಂಡು ನೆರವೇರಿಸಿದರು .ನಿರೂಪಣೆ ಶಿಕ್ಷಕಿ ಗಾಯಿತ್ರಿ ಮಾಡಿದರು.

error: Content is protected !!