fbpx

ದಲಿತ ಹೆಣ್ಣು ಮಗಳ ಮೇಲಿನ ದೌರ್ಜನ್ಯ ಖಂಡನೀಯ: ದ.ಸಂ.ಸ ಒಕ್ಕೂಟ ಆಕ್ರೋಶ

ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ವೇದಿಕೆ,ಕೊಡಗು ಜಿಲ್ಲಾ ಶಾಖೆಯಿಂದ ಸುದ್ದಿಗೋಷ್ಠಿ ನಡೆಸಿ, ದಲಿತ ಹೆಣ್ಣು ಮಗಳ ಮೇಲಿನ ದೌರ್ಜನ್ಯ ಖಂಡನೀಯ, ಪ್ರತಿ ನಿತ್ಯ ರಾಜ್ಯದ ಮೂಲೆ ಮೂಲೆಯಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ದ.ಸಂ.ಸ ಒಕ್ಕೂಟದ ಕೊಡಗು ಜಿಲ್ಲಾ ಶಾಖೆಯ ಅಧ್ಯಕ್ಷ ಪಾಲಾಕ್ಷ ಶನಿವಾರಸಂತೆಯಲ್ಲಿ ಹೇಳಿಕೆ ನೀಡಿದರು.

ಕೋಲಾರ ಮತ್ತು ಮೈಸೂರಿನಲ್ಲಿ ಪುಂಡರಿಂದ ಹೆಣ್ಣುಮಕ್ಕಳ ಮೇಲೆ ದೈಹಿಕ ಕಿರುಕುಳಕ್ಕೆ ಖಂಡನೆ ಮಾಡಿದರು. ಜಿಲ್ಲೆಯ ಹೋಬಳಿ, ತಾಲೂಕು ಜಿಲ್ಲಾ ಸಮಿತಿಯ ಸಹಯೋಗದಲ್ಲಿ ಹೆಣ್ಣುಮಕ್ಕಳ ರಕ್ಷಣೆ ಮಾಡುವಲ್ಲಿ ಹೋರಾಟ ಮಾಡಲಾಗುವುದು. ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು.ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು.

ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂ ಸ ಒಕ್ಕೂಟದ ಸೊಮವಾರಪೇಟೆ ತಾಲೂಕು ಅದ್ಯಕ್ಷ ಜನಾರ್ಧನ್.ದಲಿತ ಸಂ.ಸ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರೇಂದ್ರ.ತಾಲೂಕು ಪ್ರಧಾನ ಕಾರ್ಯದರ್ಶಿ ಸಂದೀಪ್.ಶನಿವಾರಸಂತೆ ಹೊಬಳಿ ಶಾಖೆಯ ಅಧ್ಯಕ್ಷ ಶಿವಲಿಂಗ.ಜಿಲ್ಲಾ ಸಮಿತಿಯ ಉಮೇಶ್ ಹಾಜರಿದ್ದರು.

error: Content is protected !!