ದಲಿತ ಸಂಘರ್ಷ ಸಮಿತಿಯಿಂದ ಬಾವಲಿ ಗ್ರಾಮದಲ್ಲಿ ಆಹಾರ ಕಿಟ್ ವಿತರಣೆ

ಮಡಿಕೇರಿ: ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿಯಿ ಕೋವಿಡ್ ನಿಂದ ಆರ್ಥಿಕವಾಗಿ ದುರ್ಬಲರಾಗಿರುವ ಬಾವಲಿ ಗ್ರಾಮದ ಕನ್ನಂಡ ಕಾಲೋನಿಯ ಹತ್ತು ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿ ಸಾಂತ್ವಾನ ಹೇಳಿತು. ಕೋವಿಡ್ ಲಾಕ್ಡೌನ್ ಬಡಜನರಿಗೆ ಹಾಗು ದಲಿತ ಸಮುದಾಯದವರಿಗೆ ಶಾಪವಾಗಿ ಪರಿಣಮಿಸಿದ್ದು. ತೀವ್ರ ಆಹಾರ ಕೊರತೆಯನ್ನು ಜನರು ಎದುರಿಸುತ್ತಿದ್ದಾರೆ. ಅವರಿಗೆ ಸಾಂತ್ವನ ಹೇಳಿ ದೈರ್ಯ ತುಂಬುವ ನಿಟ್ಟಿನಿಂದ ಆಹಾರ ಕಿಟ್ ವಿತರಣಾ ಕಾರ್ಯಕ್ರಮವನ್ನು ಕೊಡಗಿನಾದ್ಯಂತ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದು ಈಗಾಗಲೇ ಸಾವಿರಾರು ಕುಟುಂಬಗಳಿಗೆ ನೆರವಾಗಿದೆ.
ಕಿಟ್ ವಿತರಣಾ ಸಂದರ್ಭ ಜಿಲ್ಲಾ ಸಂಚಾಲಕ ದಿವಾಕರ್ ಹೆಚ್.ಎಲ್, ಮಡಿಕೇರಿ ತಾಲೂಕು ಸಂಚಾಲಕ ದೀಪಕ್ ಎ.ಪಿ ಹಾಗು ಪ್ರಮುಖರು ಹಾಜರಿದ್ದರು.