ದರೋಡೆ ಮಾಡಿ ನಗದು, ಚಿನ್ನಾಭರಣ ದೋಚಿದ ಕಳ್ಳರು!

ದರೋಡೆಕೋರರ ತಂಡವೊಂದು ಅರ್ಚಕರೊಬ್ಬರ ಮನೆಗೆ ನುಗ್ಗಿ ಮೂರಕಾಸ್ತ್ರಗಳಿಂದ ಬೆದರಿಸಿ ಚಿನ್ನಾಭರಣ ಮತ್ತು ನಗದು ದೋಚಿದ ಘಟನೆ ಸಂಪಾಜೆಯಲ್ಲಿ ನಡೆದಿದೆ. ಸಂಪಾಜೆಯ ಅಂಬರೀಶ್ ಭಟ್ ಎಂಬವರ ಮನೆಗೆ ನುಗ್ಗಿದ ದರೋಡೆಕೋರರು,ಮನೆಯಲಿದ್ದ ಮಹಿಳೆಯರನ್ನು ಬೆದರಿಸಿ ಈ ಕೃತ್ಯ ನಡೆಸಿದ್ದಾರೆ. ಮನೆಯಲ್ಲಿ ಗಂಡಸರು ಯಾರು ಇಲ್ಲದ ಸಂದರ್ಭ ಹೊಂಚುಹಾಕಿದ್ದು, ದಿಕ್ಕು ತೋಚದ ಮಹಿಳೆಯರು ನಗದು ಚಿನ್ನಾಭರಣ ಕಳ್ಳರಿಗೆ ನೀಡಿದ್ದಾರೆ, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!