fbpx

ದನದ ಮಾಂಸ ಮಿಕ್ಸ್: ಮೇಯರ್ ಧಿಡೀರ್ ದಾಳಿ!

ಮಂಗಳೂರು:ಕಳೆದ ಕೆಲವು ದಿನಗಳಿಂದ ಮಂಗಳೂರಿನ ಉರ್ವಾ ಮತ್ತು ಕುದ್ರೋಳಿಯಲ್ಲಿರುವ ಖಸಾಯಿಖಾನೆಯಲ್ಲಿ ಕುರಿ ಮತ್ತು ಆಡಿನ ಮಾಂಸದ ಜೊತೆ ದನದ ಮಾಂಸ(ಬೀಫ್) ಬೆರಸಿ ಮಾರಾಟ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ್ ನೇತೃತ್ವದ ತಂಡ ಧಿಡೀರ್ ದಾಳಿ ನಡೆಸಿದ್ದಾರೆ. ಖಸಾಯಿಖಾನೆಗೆ ಆಗಮಿಸುವ ಕುರಿ,ಆಡು,ಕೋಳಿ ಸೇರಿದಂತೆ ದನದ ಮಾಂಸ ಸರಬರಾಜು ಮತ್ತು ಮಾರಾಟದ ಬಗ್ಗೆ ಯಾವುದೇ ರಶೀದಿ ಇಟ್ಟುಕೊಳ್ಳದ ಇಲ್ಲಿನ ಮಾಂಸ ವ್ಯಾಪಾರಿಗಳನ್ನು ತರಾಟೆಗೆ ತೆಗೆದುಕೊಂಡ ಮೇಯರ್ ದಿನದ ವಹಿವಾಟುವಿನ ಬಗ್ಗೆ ಮಾಹಿತಿ ಪಡೆದರು,ಆದರೆ ಯಾವುದೇ ಅಂಗಡಿಯಲ್ಲೂ ದನದ ಮಾಂಸ ಮಿಶ್ರಣ ಮಾಡಿರುವ ಬಗ್ಗೆ ಸೂಕ್ತ ದಾಖಲೆ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ!??. ದಿನನಿತ್ಯ ಮಾಂಸ ಸಿದ್ದ ಪಡಿಸುವ ಸಂದರ್ಭ ಆರೋಗ್ಯ,ಪಶುವೈದ್ಯರ ಸಮ್ಮುಖದಲ್ಲಿ ನಡೆಯಬೇಕು ಎಂದು ಹೇಳಿ ಮೇಯರ್ ವಾಪಸ್ಸಾಗಿದ್ದಾರೆ.

error: Content is protected !!