ದಕ್ಷಿಣ ಕೊಡಗಿನಲ್ಲಿ ಭತ್ತದ ಗದ್ದೆಗಳು ಜಲಾವೃತ!

ದಕ್ಷಿಣ ಕೊಡಗಿನ ವಿವಿಧೆಡೆ ವರುಣನ ಆರ್ಭಟ ಹೆಚ್ಚಾಗಿದ್ದು ಭತ್ತದ ಗದ್ದೆಗಳು ಜಲಾವೃತವಾಗಿದೆ.ಲಕ್ಷ್ಮಣ ತೀರ್ಥ ನದಿ ಸೇರಿದಂತೆ,ನಿಟ್ಟೂರು ಹೊಳೆ ಭಾಗದಲ್ಲಿ ಅಪಾಯಮಟ್ಟದಲ್ಲಿ ನದಿ ನೀರು ಹರಿಯುತ್ತಿದ್ದು, ಬಹುತೇಕ ಗ್ರಾಮಗಳ ನಡುವಿನ ಸಂಪರ್ಕ ರಸ್ತೆಗಳು ಕಡಿತಗೊಂಡಿದೆ.

ಕೆ. ಬಾಡಗ,ಕುಮಟೂರು ಗ್ರಾಮದಲ್ಲಿ ಮನೆಯ ಗೋಡೆ ಕುಸಿತ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ಬಾಳೆಲೆ, ನಿಟ್ಟೂರು ಹಳೆ ಸೇತುವೆ ಮುಳುಗಡೆಯಾಗಿದಲ್ಲದೆ ಗೋಣಿಕೊಪ್ಪದ ಕೀರೆಹೊಳೆಯಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಪೊನ್ನಂಪೇಟೆ, ತಿತಿಮತಿ, ಪಾಲಿಬೆಟ್ಟ, ಹುದಿಕೇರಿ, ಟಿ. ಶೆಟ್ಟಿಗೇರಿ, ಬಿರುನಾಣಿ, ತೆರಾಲು, ಬಿ.ಶೆಟ್ಟಿಗೇರಿ, ಬೀರುಗದಲ್ಲಿ ಅಧಿಕ ಮಳೆಯಾಗಿದ್ದು ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಯಿಂದ ಕಾಳಜಿ ಕೇಂದ್ರ ಸ್ಥಾಪನೆ
ಹಾನಿ ಸಂಭವಿಸಿದ ಪ್ರದೇಶಗಳಿಗೆ ತಹಶೀಲ್ದಾರ್‌ ಯೋಗಾನಂದ ಭೇಟಿ ಪರಿಶೀಲನೆ.

error: Content is protected !!