ತೆರೆದ ಬಾವಿಗೆ ಬಿದ್ದ ಚಿರತೆ: ಹೊರಬಾರಲಾಗದೆ ಸಾವು!

ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಸಮೀಪ ಇರುವ ಬಾಳೆಲೆ, ನಿಟ್ಟೂರು ಗ್ರಾಮದಲ್ಲಿ ತೆರೆ ಬಾವಿಗೆ ಚಿರತೆಯೊಂದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಇಲ್ಲಿನ ಮಲ್ಲೂರಿನ ಮಲಚೀರ ಶರಣು ಬೆಳ್ಳಿಯಪ್ಪ ಎಂಬುವವರಿಗೆ ಸೇರಿದ ಕಾಫಿಷತೋಟದಲ್ಲಿದ್ದ ತೆರೆದ ಬಾವಿಯಲ್ಲಿ ಚಿರತೆಯ ಕಳೆಬರಹ ಕಂಡುಬಂದಿದ್ದು, ಆಹಾರ ಬೇಟೆ ಮಾಡುವ ಸಂದರ್ಭ ಬಾವಿಗೆ ಬಿದ್ದಿದೆ ಎನ್ನಲಾಗಿದೆ.
ಸುದ್ದಿ ತಿಳಿದು ಸ್ಥಳೀಯ ಗ್ರಾಮ ಪಂಚಾಯ್ತಿ ಗೆ ಮಾಹಿತಿ ನೀಡಿ, ಬಳಿಕ ಅರಣ್ಯ ಇಲಾಖೆ ಸ್ಥಳಕ್ಕೆ ಆಗಮಿಸಿ,ಮೃತ ಚಿರತೆಯನ್ನು ಹೊರ ತೆಗೆದು ಮುಂದಿನ ಕಾರ್ಯ ಪೂರ್ಣಗೊಳಿಸಿದ್ದಾರೆ.