ತೆಂಗಿನಮರ ಬಿದ್ದು ಬಾಲಕ ಸಾವು,ಬಾಲಕಿ ಗಂಭೀರ


ಮೈಸೂರು: ಆಟವಾಡುತ್ತಿದ್ದ ಮಕ್ಕಳ ಮೇಲೆ ತೆಂಗಿನಮರವೊಂದು ಬುಡ ಸಮೇತ ಬಿದ್ದ ಪರಿಣಾಮ ಬಾಲಕನೊಬ್ಬ ಮೃತಪಟ್ಟು ಮತ್ತೊಂದು ಬಾಲಕಿ ಗಂಭೀರವಾಗಿ ಗಾಯಗೊಂಡ ಘಟನೆ ಮೈಸೂರಿನ ನಂಜನಗೂಡಿನ ಕುಪ್ಪನಳ್ಳಿಯಲ್ಲಿ ನಡೆದಿದೆ.ಕೊವಿಡ್ ಹಿನ್ನಲೆ ಅಜ್ಜಿ ಮನೆಗೆ ಬಂದಿದ್ದ ಅಭಯ್ (6) ಮೃತಬಾಲಕನಾಗಿದ್ದು,ಸಂಬಂಧಿರ ಬಾಲಕಿ ಗಂಭೀರವಾಗಿ ಗಾಯಗೊಂಡು ಕೆ.ಆರ್ ಆಸ್ಪತ್ರೆಗೆ ದಾಖಲಾಗಿದ್ದಾಳೆ.