ತುಳಸಿ ಗಿಡವನ್ನು ಈ ದಿಕ್ಕಿನಲ್ಲಿ ನೆಟ್ಟರೆ ವಾಸ್ತು ದೋಷ ನಿವಾರಣೆ!

ತುಳಸಿ ಸಸ್ಯವು ಔಷಧೀಯ ಗುಣಗಳಿಂದ ಕೂಡಿದೆ. ಹಿಂದೂಧರ್ಮದಲ್ಲಿ ತುಳಸಿಯನ್ನು ದೇವರೆಂದು ಪೂಜಿಸಲಾಗುತ್ತದೆ. ಹಾಗಾಗಿ ಶಾಸ್ತ್ರದ ಪ್ರಕಾರ ತುಳಸಿ ಸಸ್ಯವನ್ನು ಎಲ್ಲಿ ಮತ್ತು ಹೇಗೆ ಇಡಬೇಕು ಎಂಬುದನ್ನು ತಿಳಿದುಕೊಳ್ಳಿ.


ತುಳಸಿ ಸಸ್ಯವನ್ನು ಮನೆಯ ಅಂಗಳದ ಮಧ್ಯೆ ಅಥವಾ ಈಶಾನ್ಯ ಅಥವಾ ಉತ್ತರ ದಿಕ್ಕಿನಲ್ಲಿ ನೆಡಬೇಕು. ಯಾಕೆಂದರೆ ಈ ದಿಕ್ಕನ್ನು ದೇವರ ದಿಕ್ಕೆಂದು ಪರಿಗಣಿಸಲಾಗುತ್ತದೆ. ತುಳಸಿ ಸಸ್ಯವನ್ನು ಬಾಲ್ಕನಿ ಮತ್ತು ಕಿಟಕಿಯ ಮೇಲೆ ಈಶಾನ್ಯ ದಿಕ್ಕಿನಲ್ಲಿ ನೆಬೇಕು. ಕಳ್ಳಿ ಹಾಗೂ ಮುಳ್ಳಿನ ಸಸ್ಯಗಳ ಜೊತೆಗೆ ತುಳಸಿಯನ್ನು ಇಡಬಾರದು.

ವಾಸ್ತುವಿನ ಪ್ರಕಾರ ಈಶಾನ್ಯ ದಿಕ್ಕನ್ನು ಸಂಪತ್ತಿನ ದೇವರಾದ ಕುಬೇರನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಆರ್ಥಿಕ ಸಮೃದ್ಧಿಗಾಗಿ ಈ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡಬೇಕು.

ಇದರಿಂದ ಕುಬೇರನ ಜೊತೆಗೆ ಲಕ್ಷ್ಮಿದೇವಿ ಕೂಡ ಸಂತೋಷಗೊಳ್ಳುತ್ತಾಳೆ. ಅಲ್ಲದೇ ತುಳಸಿ ಗಿಡ ವಾಸ್ತು ದೋಷಗಳನ್ನು ನಿವಾರಣೆಮಾಡುತ್ತದೆ.

error: Content is protected !!