fbpx

ತುರ್ತು ವಾಹನ(ಆಂಬ್ಯುಲೆನ್ಸ್) ಗೆ ದಾರಿ ಬಿಡದೆ ಇದ್ರೆ ಏನಾಗುತ್ತೆ ಗೊತ್ತ?

ಅಂಜೇರಿರ ವಿಶು ರಾಘವಯ್ಯ‌,

ಕಳೆದ ದಶಕಗಳಿಂದ ನಾವೆಲ್ಲರೂ ಸಹ ನೋಡಿದ್ದೇವೆ ಹಲವಾರು ಆಕ್ಸಿಡೆಂಟ್ಗಳು ಆಗುತ್ತ ಇದೆ, ಈಗಲೂ ಸಹ ಆಗುತ್ತೆ ಅದಕ್ಕೆ ಕಾರಣಗಳು ಮೊದಲನೆಯದಾಗಿ ರಸ್ತೆಯ ಮಧ್ಯದಲ್ಕಿ ವೀಲಿಂಗ್ಗಳು, ಅಜಾಗರೂಕತೆಯಿಂದ‌ ಇರದೆ ಅವರಿಗೆ ಇಸ್ಟ ಆದಂಗೆ ವಾಹನ ಚಲಾಯಿಸುವುದು‌.

ಬೈಕಿನಲ್ಲಿ‌ ಹೋಗುವಾಗ ಹೆಲ್ಮೆಟ್ ದರಿಸದೆ ರೇಸಿನಲ್ಲಿ ಹೋಗುವಹಾಗೆ, ಎಡಬದಿಯಲ್ಲಿ ಹೋಗಬೇಕಾದ ವಾಹನ ಬಲಬದಿಯಲ್ಲಿ ಚಲಾಯಿಸುವುದು ಮತ್ತು‌ ಓವರ್ಟೇಕ್ ಮಾಡುವುದು, ಇದನೆಲ್ಲ ಯಾಕೆ ತಿಳಿಸುತ್ತಿದ್ದೇನೆ ಅಂದರೆ ನೀವು ಮಾಡಿದ ಒಂದು ಎಡವಟ್ಟು ಬೇರೊಬ್ಬರ ಜೀವಕ್ಕೆ ಕುತ್ತು ತರುವಂತಹ ಪಾಪ ನಾವು ಮಾಡಬಾರದು ಅಲ್ಲವೇ ?????

ನಾನು ಕುಶಾಲನಗರದಿಂದ -ಮಡಿಕೇರಿ ಕಡೆ ಹಲವಾರು ವರ್ಷಗಳಿಂದ ಓಡಾಡುತ್ತಿದ್ದೇನೆ ನಾನು ನೋಡುತ್ತಿರುವ ಜನರು ನೀವಲ್ಲ ಯಾಕೆಂದರೆ ಕೆಲವೊಮ್ಮೆ ಅನ್ನಿಸುತ್ತದೆ ಯಾಕೆ ಜನಗಳು ಸಮಯ‌ ಪ್ರಜ್ಞೆ ಕಾಪಾಡಿಕೊಂಡು ಹೋಗುವುದಿಲ್ಲ ಎಂದು ಅದರ ಸತ್ಯ ಕೇಳಿದರೆ ಬಯಂಕರ ಅನ್ನಿಸುತ್ತದೆ, ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಬರುವ ೯೦% ಕೇಸುಗಳು ಆಕ್ಸಿಡೆಂಟ್ ಗಳು ಆಗಿರುತ್ತದೆ ಅಂದಹಾಗೆ ಬೇರೆ ಯಾವುದೋ ಕೇಸುಗಳಲ್ಲ ನಮ್ಮ ಮಡಿಕೇರಿ – ಕುಶಾಲನಗರ NATIONAL highway-NH ಹಲವಾರು ಸಲ ನೋಡಿದ ಮಟ್ಟಿಗೆ ತುರ್ತು ವಾಹನದ ಚಾಲಕರು ತಮ್ಮ ವಾಹನವನ್ನು‌ ಜಾಗ್ರತೆಯಿಂದ ಓಡಿಸಿಕೊಂಡು ಅಂಬ್ಯೂಲೆನ್ಸ್ ನಲ್ಲಿ ಇದ್ದಂತಹ ಆಕ್ಸಿಡೆಂಟ್ ಆದಂತಹ ಜನಗಳನ್ನು ಸಾಗಿಸುವ ಧೈರ್ಯ ಮೆಚ್ಚಲೇಬೇಕು.

ನೀವು ನಿಮ್ಮನ್ನ ಒಂದು ಸಲ ತಮ್ಮ ಮನಸಾಕ್ಷಿಯನ್ನು ಕೇಳಿಕೊಳ್ಳಿ ನಿಮ್ಮ ಮನೆಯವರಿಗೆ ಯಾರಿಗಾದರು ತುರ್ತಾಗಿ ಚಿಕಿತ್ಸೆ ಬೇಕಾದರೆ ಅಂಬ್ಯೂಲೆನ್ಸಿಗೆ ಕರೆ ಮಾಡ್ತೀರ ಅಲ್ಲ?? ಹಾಗೆಯೇ ಪಾಪ ಯಾರದೋ ಜೀವಕ್ಕೆ ನೀವೇಕೆ ಹೊಣೆಗಾರಿಕೆ ಆಗ್ತೀರ ರಸ್ತೆಯಲ್ಲಿ ಯಾಕೆ ಪುಂಡಾಟಿಕೆ ?? ಜೀವನದಲ್ಲಿ ಒಂದು ಜೀವವನ್ನು ಉಳಿಸುವ ಕಾರ್ಯ ಮಾಡಿ ,ಅದ್ನ ಬಿಟ್ಟು ಒಂದು ಜೀವವನ್ನು ಕೊಲೆ ಮಾಡುವ ಪ್ರಯತ್ನ ಮಾಡಬೇಕೆ ನೀವು???

ನಿಮ್ಮ ಹಾಗೆ ಅವರಿಗೂ ಸಹ ತನ್ನ ಫ್ಯಾಮಿಲಿ ಇರ್ತಾರೆ ಅಲ್ವ? ದಯವಿಟ್ಟು ಬಂಧು ಮಿತ್ರರೆ ತುರ್ತು ವಾಹನ ಕಣ್ಣಿಗೆ ಕಂಡರೆ ಅವರಿಗೆ ದಾರಿ ಬಿಡಿ, ನೀವು ಸಹ ನಿಮ್ಮ ಜೀವ ಉಳಿಸಿಕೊಳ್ಳಿ ,ಈ ಜೀವ ಉಳಿಸುವ ತುರ್ತು ವಾಹನದ ಚಾಲಕರಿಗೆ ಸಲಾಂ ಮಾಡುತ್ತ ಆರೋಗ್ಯ ಸೇವೆಯಲ್ಲಿ ಕರ್ತವ್ಯ ಮಾಡುತ್ತಿರುವ ಎಲ್ಲಾ ಚಾಲಕರಿಗೆ ನಮಸ್ಕರಿಸಿ ಇವರು ಸಹ ನಮ್ಮ ಕೊಡಗಿನ ಸೈನಿಕರು ಅಲ್ವಾ?? ನೀವು ಬದಲಾಗಿ , ಬೇವರನ್ನು ಸಹ ನಾವು ಬದಲಾಯಿಸಲು ಪ್ರಯತ್ನಿಸೋಣ. “ಜೀವ ಒಂದಾರರೆ ಕಣ್ಣೀರು ಸಾವಿರಾರು “.

ಅಂಜೇರಿರ ವಿಶು ರಾಘವಯ್ಯ‌,

ಆರೋಗ್ಯ ಇಲಾಖೆ, ಕುಶಾಲನಗರ ಕೊಡಗು ಜೆಲ್ಲೆ.

error: Content is protected !!