ತೀರ್ಥೋದ್ಭವಕ್ಕೆ ಭರದಿಂದ ನಡೆಯುತ್ತಿರುವ ಸಿದ್ಧತೆ ಹಾಗು ವಿಧಿ ವಿಧಾನ

ಸೆಪ್ಟೆಂಬರ್ 26 ರಂದು ಅಂದರೆ ಇಂದು ತುಲಾ ಸಂಕ್ರಮಣ ಕೈಂಕರ್ಯಗಳು ಆರಂಭವಾಗಿದೆ.
ಭಾಗಮಂಡಲ ಭಗಂಡೇಶ್ವರ ದೇವಸ್ಥಾನದಲ್ಲಿ ಕಾವೇರಿ ಜಾತ್ರೆ ನಿಯಮನುಸಾರ ಕಾರ್ಯ ನಡೆಯಲಿದೆ. ದೇವಸ್ಥಾನದ ತಕ್ಕಮುಖ್ಯಸ್ಥರಾದ ಬಳ್ಳಡ್ಕ ಮನೆಯವರಿಂದ ಪತ್ತಾಯಕ್ಕೆ ಅಕ್ಕಿ ಹಾಕುವ ಮೂಲಕ ಕಾವೇರಿ ಜಾತ್ರೆಗೆ ಚಾಲನೆ ನೀಡಲಾಗಿದೆ. ತುಲಾ ಸಂಕ್ರಮಣ ಜಾತ್ರೆಗೆ ಚಾಲನೆ ನೀಡುವ ವಿಧಿ ವಿಧಾನಗಳನ್ನು ಬಳ್ಳಡ್ಕ ಕುಟುಂಬಸ್ಥರು ನೆರವೇರಿಸಿದ್ದಾರೆ.