fbpx

ತಿಮಿಂಗಲ ವಾಂತಿ ವಶ: ಕೊಡಗಿನವರು ಸೇರಿ ನಾಲ್ವರ ಬಂಧನ!

ವಿದೇಶದಲ್ಲಿ ಸುಗಂದವಧ್ರವ್ಯ ತಯಾರಿಸಲು ಬಳಸಲಾಗುವ ಅಂಬ್ರಗ್ರಿಸ್ (ತಿಮಿಂಗಲದ ವಾಂತಿ) ಸಾಗಿಸುತ್ತಿದ್ದ ಕೊಡಗಿನ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಮೈಸೂರಿನ ಅರಣ್ಯ ಸಂಚಾರಿ ದಳ ಯಶಸ್ವಿಯಾಗಿದ್ದಾರೆ.

ತಿಮಿಂಗಲ ಮೀನಿನ ಹೊಟ್ಟೆಯಲ್ಲಿ ಜೀರ್ಣವಾಗದೆ ಮೇಣ ರೀತಿಯ ಧ್ರವ ವಾಂತಿ ಮೂಲಕ ಹೊರ ಹಾಕಿದ್ದು ಸಮುದ್ರ ದಂಡೆಯಲ್ಲಿ ಅಪರೂಪಕ್ಕೆ ಕಾಣಸಿಗಲಿದ್ದು, ಸೌದಿ ಅರೇಬಿಯಾ ಭಾಗದಲ್ಲಿ ಅಥರ್(ಸುಗಂಧ ದ್ರವ್ಯ) ತಯಾರಿಸಲು ಬಳಕೆ ಮಾಡಲಾಗುತ್ತದೆ.

ಇದನ್ನು ಸಾಗಿಸುತ್ತಿದ್ದ ಹೊದವಾಡ ಗ್ರಾಮದ ಕೆ.ಎ.ಇಬ್ರಾಹಿಂ, ಏಳನೇ ಹೊಸಕೊಟೆಯ ಬಿ.ಇ ರಫೀಕ್, ಎಂ.ಎ ತಾಹಿರ್ ನಕಾಶ್ ಮತ್ತು ಇರಟಿಯ ಪರಂಬೈಲ್ ನಿವಾಸಿ ಕೆ.ಎಂ ಜಾರ್ಜ್ ರನ್ನು ಬಂಧಿಸಿ,ಕಾರೊಂದನ್ನು ವಶಕ್ಕೆ ಪಡೆಯಲಾಗಿದೆ ಪ್ರಮುಖ ಆರೋಪ ಜಿಲ್ಲೆಯ ಕೊಯಿನಾಡು ನಿವಾಸಿ ತಲೆ ಮರೆಸಿಕೊಂಡಿದ್ದಾನೆ.

ಇದೊಂದು ಅಪರೂಪದ ಪ್ರಕರಣವಾಗಿದ್ದು, ಈ ವರೆಗೆ ದೇಶದಲ್ಲೇ ಪತ್ತೆಯಾದ 8 ನೇ ಪ್ರಕರಣವಾಗಿದೆ. ಬಂಧಿತರಿಂದ ಈ ಅಪರೂಪದ ವಸ್ತು ಸಿಕ್ಕಿದೆಯಾದರೂ, ಎಲ್ಲಿಂದ ಎನ್ನುವುದರ ಬಗ್ಗೆ ತೀವ್ರ ತನಿಖೆ ನಡೆಸಲಾಗುತ್ತಿದೆ.

error: Content is protected !!