ತಿತಿಮತಿಯಲ್ಲಿ ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ

ಹಲ್ಲೆ ಮಾಡಿರುವ ಮೂವರು ಆರೋಪಿಗಳಾದ ಫಿರೋಜ್, ಸಮೀರ್, ಎಡತೊರೆ ಸೈಯದ್‌ಆಲವಿ

ಮಡಿಕೇರಿ ಮೇ 03:ದೇಶದೆಲ್ಲೆಡೆ ಕೋರೋನ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ಇವರಿಗೆ ಚಿಕಿತ್ಸೆ ನೀಡಲು ವೈದ್ಯರು ಸಿಬ್ಬಂದಿಗಳ ಕೊರತೆ ತೀವ್ರವಾಗಿದೆ. ಪರಿಸ್ಥಿತಿ ಹೀಗಿದ್ದರೂ ಮೂವರು ದುಷ್ಕರ್ಮಿಗಳು ಸೋಮವಾರ ಕ್ಷುಲ್ಲಕ ಕಾರಣಕ್ಕೆ ವೀರಾಜಪೇಟೆ ತಾಲ್ಲೂಕಿನ ತಿತಿಮತಿ .ಪ್ರಾಥಮಿಕ‌ ಆರೋಗ್ಯ ಕೇಂದ್ರ,ದ ವಿವೇಕಾನಂದ ಪ್ರತಿಷ್ಠಾನ ದ ಆಸ್ಪತ್ರೆ ವೈದ್ಯ ಡಾ.ಜಿ.ಹೊಸಮನಿ (70) ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ವೈದ್ಯರ ಕೈ ಮೂಳೆ ಮುರಿದಿದೆ. ವೈದ್ಯ ಹೊಸಮನಿ ಅವರಿಗೆ ಗೋಣಿಕೊಪ್ಪಲಿನ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಹಲ್ಲೆಗೊಳಗಾಗಿ ಕೈ ಮುರಿದುಕೊಂಡ ವೈದ್ಯ ಹಸಮನಿ

ಹಲ್ಲೆ ನಡೆಸಿದ ಮರಪಾಲದ ಫಿರೋಜ್, ಸಮೀರ್, ಎಡತೊರೆ ಸೈಯದ್‌ಆಲವಿ ಎಂಬುವವರನ್ನು ಪೋಲೀಸರು ಬಂಧಿಸಿ ಮೊಕದ್ದಮೆ ದಾಖಲು ಮಾಡಿಕೊಂಡಿದ್ದಾರೆ.

error: Content is protected !!