ತಾ.ಪಂ,ಜಿ‌.ಪಂ‌ ಚುನಾವಣೆ ಮುಂದೂಡಿಕೆಗೆ ಚಿಂತನೆ?

ಬೆಂಗಳೂರು:ಮುಂದೂಡಿಕೆ ಮಾಡಲು ಸರ್ಕಾರದ ಚಿಂತನೆ ನಡೆಯುತ್ತಿದೆ. ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ನಂತರ ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು
ಈಶ್ವರಪ್ಪ ಹೇಳಿದ್ದಾರೆ.

ಕೋವಿಡ್ ಹೆಚ್ಚಳದಿಂದ ಚುನಾವಣೆ ಬೇಡವೆಂಬ ಸಲಹೆ ಇವೆ.ಹಾಗಾಗಿ ಸದ್ಯಕ್ಕೆ ಚುನಾವಣೆ ಮುಂದಕ್ಕೆ ಹಾಕಲು ಚಿಂತನೆ.ಸಂಪುಟ ಸಬ್ ಕಮಿಟಿ ಸಭೆಯಲ್ಲಿ ಚರ್ಚಿಸುತ್ತೇವೆ. ನಂತರ ಇದರ ಬಗ್ಗೆ ಅಂತಿಮ ತೀರ್ಮಾನ ಮಾಡ್ತೇವೆ. ಅವಧಿ ಮುಗಿದ ಕಡೆ ಆಡಳಿತಾಧಿಕಾರಿ ಹಾಕಬೇಕು. ಈ ವಿಚಾರದ ಬಗ್ಗೆಯೂ ಚರ್ಚೆ ನಡೆದಿದೆ.

ಕೋವಿಡ್ ಹೆಚ್ಚು ಉಲ್ಬಣವಾಗುತ್ತಿದೆ. ಮೂರುವರೆ ಕೋಟಿ ಜನ ಇದರಲ್ಲಿ ಭಾಗಿಯಾಗಬೇಕು ಹಾಗಾಗಿ
ಮುಂದೂಡುವುದು ಸೂಕ್ತ ಎಂಬ ಅಭಿಪ್ರಾಯ ಹೊಂ‌ಬಂದಿದೆ.ಇದನ್ನು ಕ್ಯಾಬಿನೆಟ್ ನಲ್ಲಿ ಚರ್ಚಿಸಿ, ಆಯೋಗಕ್ಕೆ ಕಳಿಸುತ್ತೇವೆ ಎಂದರು.

error: Content is protected !!