fbpx

ತಾವರೆ ಹೂವಿಗೆ ಸಖತ್ ಡಿಮ್ಯಾಂಡಪ್ಪೋ ಡಿಮ್ಯಾಂಡು!

ಶ್ರೀ ಲಕ್ಷ್ಮಿ ಪ್ರಿಯವಾದ ತಾವರೆ ಹೂವಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಾಗಿದೆ,ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ದೂರದ ಪಿರಿಯಾಪಟ್ಟಣ,ಹುಣಸೂರು ಭಾಗದಿಂದ ಹೂವಿನ ಮೊಗ್ಗು ,ಅರಳಿದ ಹೂವನ್ನು ತಂದು ಕುಶಾಲನಗರ ಸುತ್ತ ಮುತ್ತ ಮಾರಾಟ ಮಾಡಲಾಗುತ್ತಿದೆ.

ಕೋವಿಡ್ ಸಂಬಂಧ ಸಂಕಷ್ಟದಲ್ಲಿಯೂ ಜೀವವನ್ನು ಪಣಕಿಟ್ಟು ತೆಪ್ಪ ಇಲ್ಲವೇ ಟೈಯರ್ ಟ್ಯೂಬ್ ಮೂಲಕ ಕೆರೆಗಿಳಿದು ಸಂಗ್ರಹಿಸುವ ಈ ಹೂವುಗಳು ಜೋಡಿಗೆ 40-50 ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ. ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ವರಮಹಾಲಕ್ಷ್ಮಿ ಈ ಮೂಲಕವಾದರೂ ಲಕ್ಷ್ಮಿ ಒಲಿದು ಬರಲಿ ಎಂದು ಹಾರೈಸಬೇಕಷ್ಟೆ.

error: Content is protected !!