ತಾವರೆಕೆರೆ ಒತ್ತುವರಿ ತೆರವು ಕಾರ್ಯ ಆರಂಭ

ಕುಶಾಲನಗರ ಪಟ್ಟಣದ ಹೊರವಲಯದಲ್ಲಿರುವ ಬಫರ್ ಝೋನ್ ಗೆ ಒಳಪಡುವ ತಾವರೆ ಕೆರೆಯ ಒತ್ತುವರಿ ತೆರವು ಕಾರ್ಯ ಆರಂಭವಾಗಿದೆ.

ಕೆರೆಯ ಸುತ್ತಮುತ್ತ 30 ಮೀಟರ್ ವಿಸ್ತೀರ್ಣದಲ್ಲಿ ಬಫರ್ ಝೋನ್ ಗೆ ಒಳಪಡುತ್ತಿದ್ದು,ಈ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಒತ್ತುವರಿ ಮಾಡಲಾಗಿರುವ ಒಂದು ಕಾಲೇಜಿನ ಕಟ್ಟಡ ಸೇರಿದಂತೆ, ವಾಣಿಜ್ಯ ಕಟ್ಟಡ ಮತ್ತು ಮರದ ಮಿಲ್ ಒಳಗೊಂಡಿದೆ.

ಒಟ್ಟು 3.84 ಏಕರೆ ವ್ಯಾಪ್ತಿಯಲ್ಲಿನ ಈ ಕೆರೆಯ ಒತ್ತುವರಿಯಾಗಿರುವ ಸಂಬಂಧ ಹಲವು ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದರಲ್ಲದೆ, ನ್ಯಾಯಾಲಯದಲ್ಲಿ ವಿಚಾರಣೆ ಒಳಪಟ್ಟ ನಂತರ ಕಂದಾಯ ಇಲಾಖೆಯಿಂದ ಸರ್ವೆ ಕಾರ್ಯ ನಡೆಸಿದ್ದು, ಒತ್ತುವರಿಯಾಗಿರುವುದು ದೃಡಪಟ್ಟಿದ್ದು, ಇದೀಗ ಪಟ್ಟಣ ಪಂಚಾಯತಿಯ ವತಿಯಿಂದ ತೆರವು ಕಾರ್ಯಕ್ಕೆ ಮುಂದಾಗಿದೆ.

error: Content is protected !!