ತಾಳ್ಮೆ

ಉಪದ್ರವದಿಂದ ತಾಳ್ಮೆ ಹುಟ್ಟುತ್ತದೆ ತಾಳ್ಮೆಯಿಂದ ಅನುಭವಸಿದ್ದಿ ಹುಟ್ಟುತ್ತದೆ ಅನುಭವದಿಂದ ನಿರೀಕ್ಷೆ ಹುಟ್ಟುತ್ತದೆ. ನಿರೀಕ್ಷೆ ಫಲಿಸಬೇಕಾದರೆ ಇವುಗಳರಿವಿರಬೇಕು
ನಮ್ಮ ನಿರೀಕ್ಷೆಯಂತೆ ಎಲ್ಲಾ ಸಂಗತಿಗಳು ನೆರವೇರುವಂತಿದ್ದರೆ ನಾವೇ ದೇವರಾಗುತ್ತಿದ್ದೆವು ನಾನು, ನನ್ನದು, ನನ್ನಿಂದ ಎಂಬ ಅಹಂಭಾವದ ಉದ್ಭವಕ್ಕೆ ಕಾರಣವಾಗಿಬಿಡುತ್ತಿದ್ದೆವು
ನಮಗಾಗುವ ಪರಿಶೋಧನೆಯು ಅನೇಕವಿದ್ದರೂ ಕೇವಲ ಆನಂದಕರವಾದದ್ದೆಂದು ಎಣಿಸಬೇಕು ನಮಗೆ ನಷ್ಟವಾಗುತ್ತಿದ್ದರೂ ತಾಳ್ಮೆಯಿಂದಿದ್ದರೆ ಧನ್ಯತೆಯೊಂದಿಗೆ ಪ್ರತಿಫಲಕ್ಕೆ ಪಾತ್ರರಾಗುವೆವು
ಹೇಮಾವತಿ.ಹೆಚ್.ಆರ್ ಮಡಿಕೇರಿ