fbpx

ತಾಲ್ಲೂಕು ಕಛೇರಿಗೆ ಭೇಟಿ ನೀಡಿದ ಡಿಸಿ

ಕುಶಾಲನಗರ ತಾಲ್ಲೂಕ ರಚನೆಯಾದ ಬಳಿಕ ಮೊದಲಭಾರಿಗೆ ತಾಲ್ಲೂಕು ಕಛೇರಿಗೆ ಭೇಟಿ ನೀಡುತ್ತಿದ್ದು, ನೂತನ ಕಚೇರಿ ಆರಂಭವಾಗುವರೆಗೂ ನಾಡ ಕಛೇರಿಯಲ್ಲೇ ಎಲ್ಲಾ ವ್ಯವಹಾರಗಳು ಕಾರ್ಯನಿರ್ವಹಿಸಲಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸ್ಪಷ್ಟನೆ ನೀಡಿದ್ದಾರೆ.

ಮೇಲ್ದರ್ಜೆಗೆ ಏರಿರುವ ಕಟ್ಟಡದ ಉದ್ಘಾಟನೆ ಮಾಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು,ಅಸ್ಥಿತ್ವದಲ್ಲಿರುವ ಕಟ್ಟಡವನ್ನು ಮೇಲ್ದರ್ಜೆಗೆ ಏರಿಸುವ ಸಂಬಂಧ ಭೇಟಿ ನೀಡಲಾಗಿದ್ದು ಈ ಹಿಂದೆ ನೂತನ ಕಟ್ಟಡ ಸ್ಥಾಪನೆ ಸಂಬಂಧ ಚರ್ಚೆ ನಡೆದಿದೆ,ಈಗಾಗಲೇ 13 ಲಕ್ಷದಲ್ಲಿ ಅಭಿವೃದ್ದಿ ಕಾರ್ಯ ನೆರವೇರಿಸಲಾಗಿದೆ,ನೂತನ ಕಚೇರಿ ಮಾಡುವ ಉದ್ದೇಶವಿದೆ ಎಂದರು.

ಸಾರ್ವಜನಿಕ ವಲಯದಲ್ಲಿ ನಾಡ ಕಛೇರಿ ವ್ಯಾಪ್ತಿಯಲ್ಲಿ ಸಾಕಷ್ಟು ದೂರು ಬಂದಿದ್ದು ಅವುಗಳ ಬಗ್ಗೆ ಕ್ರಮ ವಹಿಸುವ ಭರವಸೆ ನೀಡಿದರು.

ಲೋಕೋಪಯೋಗಿ ಇಲಾಖೆಯಿಂದ ಆರ್.ಎಂ.ಸಿ ವ್ಯಾಪ್ತಿಯಲ್ಲಿ ಪ್ರದೇಶ ಗುರುತಿಸಲಾಗಿದೆ, ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಕಚೇರಿ ನಿರ್ವಹಿಸಲಿದೆ ಹೇಳಿದ ಅವರು,ಸ್ವಂತ ಕಟ್ಟಡ ಆಗುವರೆಗೂ ಇದೇ ನಾಡ ಕಚೇರಿಯಿಂದಲೇ ಪ್ರತಿಯೊಂದು ಕಾರ್ಯ ನಿರ್ವಹಿಸಬಹುದಾಗಿದೆ ಎಂದರು.

ಸರಳ ಸಮಾರಂಭದಲ್ಲಿ ತಹಶೀಲ್ದಾರ್ ಪ್ರಕಾಶ್,ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜ್ ಶಿರೆಸ್ಥೆದಾರ್ ಮಧುಸೂಧನ್ ,ಕಂದಾಯ ಅಧಿಕಾರಿ ಸಂತೋಷ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು

error: Content is protected !!