ತಾಲೂಕು ತೋಟಗಾರಿಕಾ ಇಲಾಖೆಗೆ ನೂತನ ಅಧಿಕಾರಿ!

ಸೋಮವಾರಪೇಟೆ:-ತಾಲೂಕು ತೋಟಗಾರಿಕಾ ಇಲಾಖೆಯ ಅಧಿಕಾರಿಯಾಗಿ ಡಾ.ಮಂಜುನಾಥ್ ಜಿ.ಶೆಟ್ಟಿ ಅಧಿಕಾರ ಸ್ವೀಕರಿಸಿದ್ದಾರೆ.

ಸೋಮವಾರ ಪೇಟೆ ತೋಟಗಾರಿಕಾ ಇಲಾಖೆಯಲ್ಲಿ ಖಾಲಿ ಇದ್ದ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು (ಜಿ. ಪಂ.), ಹುದ್ದೆಗೆ ನೂತನವಾಗಿ ನೇಮಕ ಗೊಂಡು ಅಧಿಕಾರ ವಹಿಸಿಕೊಂಡಿದ್ದಾರೆ.
ಮಂಜುನಾಥ್ ರವರು ಎಂಎಸ್ಸಿ (ತೋಟಗಾರಿಕೆ), ಪಿಎಚ್ಡಿ (ಕೊಯ್ಲೋತ್ತರ ತಂತ್ರಜ್ಞಾನ) ಪದವಿದರರಾಗಿದ್ದು.
ಕೆಪಿಎಸ್ಸಿ ಮುಖಾಂತರ ನಡೆದ ೨೦೧೮ ಸಾಲಿನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ನೇರ ನೇಮಕಾತಿಯಲ್ಲಿ ಆಯ್ಕೆಯಾಗಿ ಮೊದಲಭಾರಿಗೆ ಸರ್ಕಾರಿ ಅಧಿಕಾರಿಯಾಗಿದ್ದಾರೆ.

error: Content is protected !!