fbpx

ತಾಯಿ ಮಗ ಎಸ್ಸೆಸ್ಸೆಲ್ಸಿ ಪಾಸ್!


ಗೋಣಿಕೊಪ್ಪಲು ಸಮೀಪ ಕೈಕೇರಿ ನಿವಾಸಿ ,ಸಮಾಜ ಸೇವಕರಾದ ಪಡಿಕಲ್ ಕುಸುಮಾವತಿ ಚಂದ್ರಶೇಖರ್ ಹಾಗೂ ಪುತ್ರ ಗೌತಮ್ ಈ ಬಾರಿ ಒಟ್ಟಿಗೆ sslc ಪರೀಕ್ಷೆ ಬರೆದಿದ್ದರು.

ಪುತ್ರ ಗೌತಮ್ ಗೋಣಿಕೊಪ್ಪಲು ಪ್ರೌಢಶಾಲೆ ಯಲ್ಲಿ ಈ ಹಿಂದೆ ಪರೀಕ್ಷೆ ಬರೆದು
ಗಣಿತದಲ್ಲಿ ಅನ್ನುತ್ತೀರ್ಣನಾಗಿದ್ದು ಈ ಬಾರಿ ತಾಯಿಯೊಂದಿಗೆ ಪರೀಕ್ಷೆ ಕೂರುವ ಅವಕಾಶ ಸಿಕ್ಕಿತ್ತು.ತಾಯಿ ಎಲ್ಲ 6 ವಿಷಯಗಳಿಗೂ ಮಡಿಕೇರಿಯಲ್ಲಿ ಪರೀಕ್ಷೆಗೆ ಹಾಜರಾಗಿದ್ದರೆ, ಪುತ್ರ ಗೌತಮ್ ಗೋಣಿಕೊಪ್ಪಲು ಪ್ರೌಢಶಾಲೆ ಯಲ್ಲಿ ಪರೀಕ್ಷೆಗೆ‌ ಹಾಜರಾಗಿದ್ದು ವಿಶೇಷ.
ತಾಯಿ ಕುಸುಮಾವತಿ 18 ವರ್ಷಗಳ ಹಿಂದೆ ಟಿ.ಶೆಟ್ಟಿಗೇರಿ ಮಾಯಣಮಾಡ ಮಂದಣ್ಣ ಪ್ರೌಢಶಾಲೆ ಯಲ್ಲಿ 9 ನೇ ತರಗತಿಯಲ್ಲಿ ಓದುತ್ತಿರಬೇಕಾದರೆ ವಿವಾಹವಾದ್ದರಿಂದ ವಿದ್ಯಾಭ್ಯಾಸಕ್ಕೆ ಕಡಿವಾಣ ಬಿತ್ತು.ಇದೀಗ 18 ವರ್ಷಗಳ ನಂತರ sslc ಪರೀಕ್ಷೆ ಬರೆದು ಪಾಸಾಗಿದ್ದಾರೆ. ತಾಯಿ ಮಗ ಇಬ್ಬರೂ sslc ಪರೀಕ್ಷೆ ಬರೆದು ಉತ್ತೀರ್ಣರಾಗಿರುವದು ಕೊಡಗು ಜಿಲ್ಲೆಯ ಮಟ್ಟಿಗೆ ಈ ಬಾರಿ ವಿಭಿನ್ನ ಸಾಧನೆಯಾಗಿದೆ.

error: Content is protected !!