fbpx

ತಾಯಿ ಭುವನೇಶ್ವರಿಯ ಹೆಮ್ಮಯ ಪುತ್ರ: ಆರ್.ಡಿ ಅನಿಲ್

ಕನ್ನಡಕ್ಕಾಗಿ ಕೈ ಎತ್ತು

ನಿನ್ನ ಕೈ ಕಲ್ಪತರುವಾಗುವುದು

ಕನ್ನಡಕ್ಕಾಗಿ ದನಿ ಎತ್ತು

ಅಲ್ಲಿ ಪಾಂಚಜನ್ಯ ಮೊಳಗುವುದು

ಕನ್ನಡಕ್ಕಾಗಿ ಕಿರು ಬೆರಳೆತ್ತಿದರೂ

ಅದೇ ಗೋವರ್ಧನ ಗೀತೆಯಾಗುವುದು

ಕವಿ ಕುವೆಂಪು

ಕನ್ನಡ ಭಾರತದ ಅತೀ ಹಳೆಯ ಭಾಷೆಗಳಲ್ಲಿ ಒಂದಾಗಿದೆ. ಕನ್ನಡಕ್ಕೆ ಸುಮಾರು 2,000 ವರ್ಷಗಳಷ್ಟು ಅಗಾಧ ಇತಿಹಾಸವಿದೆ. ಅಂತಹ ಕನ್ನಡ ಇಂದು ಬೆಂಗಳೂರಿನ ರಾಜಧಾನಿಯಲ್ಲಿ ಇತ್ತೀಚೆಗೆ ಪರ ಭಾಷಿಕರ ವಾಸಿಸುವಿಕೆಯಿಂದಾಗಿ ಕನ್ನಡದ ಬಳಕೆ ಕಡಿಮೆಯಾಗುತ್ತಿದೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ.

ಆ ವಿಚಾರಕ್ಕೆ ಸಂಬಂಧಿಸಿದಂತೆ ನಿಸ್ವಾರ್ಥದಿಂದ ಕನ್ನಡಕ್ಕೆ ತನ್ನ ಅಳಿಲು ಸೇವೆಯನ್ನು ಅಭಿಯಾನದಲ್ಲಿ ಮಾಡುತ್ತಿದ್ದಾರೆ. ಯಾವ ಸಂಘಟನೆಯಲ್ಲೂ ಸಕ್ರೀಯವಾಗಿರದೆ, ಕನ್ನಡವನ್ನು ಉಳಿಸುವ, ಬೆಳೆಸುವ ಸದುದ್ದೇಶದೊಂದಿಗೆ ಸ್ವಯಂ ಪ್ರೇರಿತರಾಗಿ ಕಾರ್ಯೋನ್ಮುಕರಾಗಿದ್ದಾರೆ‌.

ಬೆಂಗಳೂರು ಮಹಾ ನಗರ ಪಾಲಿಕೆಯಲ್ಲಿ ಎಲ್ಲಾ ಅಂಗಡಿ ಮಳಿಗೆಗಳ ನಾಮ ಫಲಕದಲ್ಲಿಯೂ ಸಹ 60%ನಷ್ಟು ಕನ್ನಡ ಬಳಕೆ ಇರಬೇಕು ಎಂಬ ನಿಯಮವಿದೆ. ಆದರೆ ಅದೆಷ್ಟೋ ಮಳಿಗೆಗಳು ಈ ನಿಯಮವನ್ನು ಗಾಳಿಗೆ ತೂರಿ ಇಂಗ್ಲೀಷ್ ಬಳಕೆ ಮಾಡುತ್ತಿದೆ. ಅದನ್ನು ಸರಿ ಪಡಿಸುವ ನಿರಂತರ ಅಭಿಯಾದ ಮಾದರಿಯಲ್ಲಿ ನಡೆಸುತ್ತಿದ್ದಾರೆ ಬೆಂಗಳೂರಿನ ರಾಮಮೂರ್ತಿ ನಗರದ ಕೋದೇನ ಹಳ್ಳಿಯ ಆರ್.ಡಿ ಅನಿಲ್ ಅವರು.

ಕನ್ನಡದ ನೂತನ ನಾಮಫಲಕದ ಅಭಿಯಾನ ನಡೆಸುತ್ತಿರುವ ಹೆಮ್ಮೆಯ ಕನ್ನಡಿಗ ಆರ್.ಡಿ ಅನಿಲ್

ಯಾವೆಲ್ಲಾ ಮಳಿಗೆಗಳು ಕನ್ನಡವನ್ನು ತಮ್ಮ ನಾಮಫಲಕದಲ್ಲಿ ನಿರ್ಲಕ್ಷಿಸಿ ಬೇಕೋ ಬೇಡವೋ ಎಂಬ ರೀತಿಯಲ್ಲ ಬಳಸಿದೆಯೋ ಅದರ ಮಾಲಿಕರ ಬಳಿಯೇ ಹೋಗಿ ನಿಯಮವನ್ನು ವಿನಯವಾಗಿಯೇ ವಿವರಿಸಿ, ಕನ್ನಡದ ಫಲಕ ಹಾಕಿಸುತ್ತಿದ್ದಾರೆ ಆರ್. ಡಿ ಅನಿಲ್ ಅವರು.

ಯಾವ ಬಿರುದು, ಪ್ರಶಸ್ತಿ, ಸನ್ಮಾನಗಳ ಆಸೆಯೂ ಇಲ್ಲದೆ, ಯಾವ ಸಂಘಟನೆಗಳನ್ನು ಸೇರದೆ, ಸಿಂಹದಂತೆ ಸಿಂಗಲ್ಲಾಗಿಯೇ ಸಿರಿ ಕನ್ನಡದ ಸೇವೆಯಲ್ಲಿ ಸವಿಯನ್ನು ಕಾಣುತ್ತಿರುವರು. ವಿದ್ಯಾಭ್ಯಾಸವಮ್ನು ಕನ್ನಡ ಮಾಧ್ಯಮದ ಸರಕಾರಿ ಶಿಕ್ಷಣ ಸಂಸ್ಥೆಯಲ್ಲಿಯೇ ಮುಗಿಸಿದ ಇವರಿಗೆ ಕನ್ನಡ ಎಂದರೆ ಪಂಚಪ್ರಾಣ. ಇವರ ಕನ್ನಡದ ಪ್ರೀತಿ ಕಂಡರೆ

ಕವಿ ರಾಷ್ಟ್ರ ಕವಿ ಕುವೆಂಪು ಅವರು ಬರೆದ

ಕನ್ನಡವೆಂದರೆ ಕುಣಿದಾಡುವುದೆನ್ನೆದೆ

ಕನ್ನಡ ಎನೆ ಕಿವಿ ನಿಮಿರುವುದು!

ಕಾಮನ ಬಿಲ್ಲನು ಕಾಣುವ ಕವಿಯೊಲು

ತೆಕ್ಕನೆ ಮನ ಮೈ ನಿಮಿರುವುದು!

ಪ್ರತಿಭಾನ್ವಿತ ನಟ, ಸಿನಿಮಾ ನಿರ್ಮಾಪಕರು

ಎಂಬ ಸಾಲುಗಳು ನೆನಪಾಗುತ್ತದೆ. ಕನ್ನಡಕ್ಕಾಗಿ ನೀವು ಧನಿ ಎತ್ತಲು ಸ್ಪೂರ್ತಿ ಏನು? ಎಂದು ಕೇಳಿದರೆ, “ನೋಡಿ ಕನ್ನಡ ಈ ರಾಜ್ಯದ ಭಾಷೆ. ಈ ರಾಜ್ಯದಲ್ಲಿ ಬದುಕು ಕಟ್ಟಿಕೊಂಡಿರುವವರೆಲ್ಲರೂ ಕನ್ನಡಕ್ಕೆ ಗೌರವ ಕೊಟ್ಟು, ಕನ್ನಡವನ್ನೇ ಅತಿ ಹೆಚ್ಚು ಬಳಸಬೇಕು. ಕನ್ನಡ ಬಳಕೆ ಎಲ್ಲರೂ ಮಾಡಬೇಕು.ಕರ್ನಾಟಕದೊಳಗೆ ಯಾರೇ ಕನ್ನಡಕ್ಕೆ ಅನ್ಯಾಯ ಮಾಡುತ್ತಿದ್ದರೂ,ಅಲ್ಲಿ ಹೋಗಿ ಪ್ರಶ್ನಿಸುವ ಹಕ್ಕು ಪ್ರತಿ ಕನ್ನಡಿಗನಿಗೂ ಇದೆ. ಅದನ್ನೇ ನಾನು ಮಾಡುತ್ತಿದ್ದೇನೆ. ನೋಡಿ ಕನ್ನಡಕ್ಕೆ ಸೇವೆ ಸಲ್ಲಿಸಲು ನಾವು ಕನ್ನಡ ಸಂಘಟನೆ ಕಟ್ಟಿ, ಗುಂಪಾಗಿ ಹೋರಾಡಬೇಕೆಂದೇನೂ ಇಲ್ಲ. ಕನ್ನಡದ ಮೇಲೆ ಅಭಿಮಾನ ಇರುವ ಯಾರಾದರೂ ಈ ಕೆಲಸವನ್ನು ಒಬ್ಬರೇ ಮಾಡಬಲ್ಲರು ಎಂಬುದಕ್ಕೆ ನಾನೇ ಉದಾಹರಣೆ ಎಂದರು.

ಈವರೆಗೆ ಸುಮಾರು 25-30 ದೊಡ್ಡ ದೊಡ್ಡ ಅಂಗಡಿ ಮಳಿಗೆಗಳ, ಸೂಪರ್ ಮಾರ್ಕೆಟ್ಟುಗಳ, ಬಹುರಾಷ್ಟೀಯ ಹೊಟೇಲ್ಲುಳ ನಾಮ ಫಲಕದಲ್ಲಿ ನಾಮಕಾವಸ್ಥೆಗಷ್ಟೇ ಬಳಸಲಾಗಿದ್ದ ಕನ್ನಡವನ್ನು ನಳನಳಿಸಿ ಎದ್ದು ಕಾಣುವಂತೆ ಬದಲಾವಣೆಯನ್ನು ತಂದಿದ್ದಾರೆ.

ಯುವ ಜನ ಸೇವಕ ಆರ್.ಡಿ ಅನಿಲ್ ಅವರು

ಕೇವಲ ಕನ್ನಡಕ್ಕಷ್ಟೇ ಅಲ್ಲದೆ ಕನ್ನಡಿಗರು ಯಾರಾದರೂ ಕಷ್ಟದಲ್ಲಿ ಸಿಲುಕಿಕೊಂಡಿದ್ದರೆ, ಅವರ ನೆರವಿಗೆ ಧಾವಿಸಿ ಸಹಾಯ ಹಸ್ತ ಚಾಚುತ್ತಾರೆ. “ನನಗೆ ಅವರು ಗೊತ್ತು ಇವರು ಗೊತ್ತು ಅಂತ ಹೇಳಿ ಬದಲಾವಣೆ ತರೋದಲ್ಲ. ನಮ್ಮ ಬೆನ್ನೆಲುಬು ನಮ್ಮ ಬೆನ್ನಲ್ಲೇ ಇರಬೇಕು ಹೊರತು ಬೇರೆ ಯಾರೋ ಆಗಿರಬಾರದು” ಎಂಬ ಕೆಚ್ಚೆದೆಯ ಸ್ವಾಭಿಮಾನದಿಂದ ನುಡಿವ ಅವರು “ನನಗೆ ಎಲ್ಲಾ ತರಹದ ವ್ಯಕ್ತಿಗಳ  ಸಂಪರ್ಕವೂ ಇದೆ. ಆದರೆ ತೀರಾ ಅಗತ್ಯ ಅನ್ನಿಸಿದಾಗ ಮಾತ್ರವೇ ಬಳಸುತ್ತೇನೆ. ಬಹುತೇಕ ನಾನೊಬ್ಬನೇ ಒಬ್ಬಂಟಿಯಾಗಿ ಒಂಟಿ ಸಲಗದಂತೆ ಎಲ್ಲಾ ಬದಲಾವಣೆ ಕಾರ್ಯ ರೂಪಕ್ಕೆ ತರಲು ಮುಂದಾಗುತ್ತೇನೆ” ಎನ್ನುತ್ತಾರೆ ಆತ್ಮಾಭಿಮಾನದಿಂದ.

ದೇಹಿ ಎನ್ನುವವರಿಗೆ ನಾಸ್ತಿ ಎನ್ನದೆ ತಮಗೆ ಕಷ್ಟವಿದ್ದರೂ ಸರಿಯೇ ಅವರದೇ ಹಣದಲ್ಲಿ ಎಷ್ಟೋ ಬಾರಿ ಸಹಾಯ ಮಾಡಿರುವರು. ಕೊಡಗಿನಲ್ಲಿ ಪ್ರಕೃತಿ ವಿಕೋಪವಾಗಿದ್ದಾಗ ತನ್ನ ಕೈಯಿಂದಲೇ ಒಂದು ಲಕ್ಷ ರೂಪಾಯಿಯಷ್ಟು ಅಗತ್ಯ ವಸ್ತುಗಳನ್ನು ಸಂತೃಸ್ತರಿಗೆ ನೀಡಿ ಅಭಯ ತೋರಿದ್ದರು

“ನನ್ನಂತೆಯೇ ಬೇರೆ ಅವರ ಕಡೆ ಬೊಟ್ಟು ಮಾಡದೆ ಇಂದಿನ ಯುವ ಜನರು ಕನ್ನಡದ ಪ್ರಗತಿಗೆ ಶ್ರಮಿಸಿ ಬಿಟ್ಟರೆ ಕನ್ನಡದ ಮೆರಗು ಮತ್ತಷ್ಟು ಪ್ರಖರವಾಗುವುದರಲ್ಲಿ ಅನುಮಾನವಿಲ್ಲ”. ಎಂದು ಯುವ ಜನರಿಗೆ ಕರೆ ಕೊಡುತ್ತಾರೆ.

ಕೆಚ್ಚೆದೆಯ ಹೋರಾಟಗಾರ

ಕನ್ನಡ ನಾಡು ನುಡಿಗೆ ತನ್ನದೇ ಆದ ವಿಶಿಷ್ಟ ಹಾದಿಯಲ್ಲಿ ಸಾಗುತ್ತಾ, ಸೇವೆ ಸಲ್ಲಿಸುತ್ತಿರುವ ಆರ್.ಡಿ ಅನಿಲ್ ಅವರು ನಟಿಸಿರುವ ರಾಜ್ ಧೂತ್ ಸಿನಿಮಾ ನಡೆಯುತ್ತಿದೆ. ತನಿಖೆ ಎಂಬ ಸಿನಿಮಾಗಳಲ್ಲಿ ನಟಿಸಿ ನಿರ್ಮಾಣ ಮಾಡಿದ್ದು, ರಿಲೀಸಿಗೆ ಇನ್ನೇನು ಕೆಲವೇ ದಿನಗಳಲ್ಲಿ ಸಿದ್ಧವಾಗಲಿದೆ.

ಧೀರ ಹಮ್ಮೀರನಂತೆ ಕನ್ನಡ ಭಾಷೆಗಾಗಿ ಹೆದರದೆ‌ ಶ್ರಮಿಸುತ್ತಿರುವ ಆರ್.ಡಿ ಅನಿಲ್ ಅವರು ಸುದ್ದಿ ಸಂತೆ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿ, ಸದಾ ಬೆಂಬಲವಾಗಿರು ಆಶ್ವಾಸನೆ ನೀಡಿ ಶುಭ ಕೋರಿದರು.

error: Content is protected !!