fbpx

ತಾಯಿಯ ರೋಧನೆ..!!

ಚಿತ್ರ :ದಿನೇಶ್ ಮಾಲಂಬಿ

ಕೊಡಗು(ಆಲೂರು ಸಿದ್ದಾಪುರ):ಹೆತ್ತಮ್ಮನಿಗೆ ಮಕ್ಕಳು ಏನೇ ತಪ್ಪು ಮಾಡಿದರೂ ಬೈಯುತ್ತಾರೆ ,ಹೊಡೆಯುತ್ತಾರೆ ಮತ್ತೆ ಆಕೆಯೇ ಬಂದು ಕೈತುತ್ತು ನೀಡುತ್ತಾಳೆ. ಮಾತು ಬರುವ ನಾವುಗಳೇ ಹೀಗೆ ಇರುವಾಗ ಮೂಕ ಪ್ರಾಣಿಗಳು ಏನು ಮಾಡಬೇಕು ಹೇಳಿ, ತಾಯಿಯನ್ನು ಹುಡುಕಿಕೊಂಡು ಹೊರಟಿದ್ದ ಪುಟ್ಟ ಶ್ವಾನ ಮರಿ ರಸ್ತೆ ಅಪಘಾತಕ್ಕೆ ಈಡಾಗಿ ಬದಿಯಲ್ಲಿ ಅನಾಥವಾಗಿ ಬಿದಿತ್ತು,ಹೆತ್ತ ಮರಿಯನ್ನು ಕಣ್ಣ ಮುಂದೆಯೇ ಪಟ್ಟಣದ ಐಬಿ ರಸ್ತೆಯಲ್ಲಿ ಕೊಂದು
ಪರಾರಿಯಾದ ಕರುಣೆಯಿಲ್ಲದ ವಾಹನ ಚಾಲಕ.ಹೆತ್ತ ತಾಯಿ ಶ್ವಾನ ತನ್ನ ಮರಿ ಸತ್ತಿರುವುದು ಅರಿತ್ತಿದ್ದರೂ ತಾಯಿಯ ಕೊನೆಯ ಪ್ರಯತ್ನ ನಡೆಸಿತು. ಹೌದು ಕೆಲವೊಂದು ಬಾರಿ ಅಂತಿಮ ಕ್ಷಣದಲ್ಲಿ ತಾಯಿಯ ಸ್ಪರ್ಷದಿಂದ ಬದುಕಿರುವ ಉದಾಹರಣೆಗಳಿದೆ.

ಹೀಗೆ ಬಳಿ ಬಂದು ನೋಡಿದ್ದಾಗ ಅದು ಮೃತಪಟ್ಟಿತ್ತು,ಎಬ್ಬಿಸಲು ಪ್ರಯತ್ನಿಸಿತು,ಬಡಿದು ಏಳಿಸಲೂ ಪ್ರಯತ್ನ ಪಟ್ಟಿತು ಸ್ಥಳೀಯರು ಮರಿಯನ್ನು ಮುಟ್ಟುವುದಕ್ಕೆ ಹೋದರೆ ಡಿಕ್ಕಿ ಪಡೆಸಿದ ವ್ಯಕ್ತಿ ಮೇಲಿನ ಸಿಟ್ಟು ತೋರಿಸುತ್ತಿತ್ತು ಹಲವು ಗಂಟೆಗಳ ಕಾಲ ಮರಿಯ ಮೃತದೇಹದ ಬಳಿಯೇ ಕಣ್ಣೀರಿಡುತ್ತಾ ಮೂಖರೋಧನೆ ವ್ಯಕ್ತ ಪಡಿಸುತ್ತಿದ್ದ ದೃಶ್ಯ ಮನಕಲುಕುವಂತಿತ್ತು,ಬಳಿಕ ಸಂಜೆ ಹೊತ್ತಿಗೆ ಸ್ಥಳೀಯರೇ ಆ ಮರಿಗೆ ಮುಕ್ತಿ ನೀಡಿದರು.

error: Content is protected !!