ತಳಮಟ್ಟದ ಕ್ರಮಕ್ಕೆ ಮುಂದಾದಹಾಕತ್ತೂರು ಗ್ರಾಮ ಪಂಚಾಯಿತಿ:ಕೊರೊನಾ ಟಾಸ್ಕ್ ಫೋರ್ಸ್!
ಕೊಡಗು: ಶಂಖದಿಂದಲೇ ಬಂದರೆ ತೀರ್ಥ ಎನ್ನುವಂತೆ ಹಾಕತ್ತೂರು ಪಂಚಾಯ್ತಿ ಮಾದರಿ ರೂಲ್ಸ್ ತಂದಿದ್ದಾರೆ. ನಾಳೆಯಿಂದ ಕೆಲಸಕ್ಕೆ ಹಾಕತ್ತೂರಿಿನಿಂದ ಹೊರಗಡೆ ಹೋಗಬಾರದು ( ನಾಳೆಯಿಂದ ದಿನಾಂಕ 12 05 2021ವರೆಗೆ) ಮಾಸ್ಕ ಧರಿಸಿದರೆ ಹೊರಗಡೆ ಬಂದಲ್ಲಿ 100ರೂ ದಂಡ ವಿಧಿಸಲಾಗುವುದು.
ಅಂಗಡಿ ಹೋಟೆಲಿನಲ್ಲಿ ಟೀ ತಿಂಡಿ ಕೊಡಬಾರದು ಎಲ್ಲ ಅಂಗಡಿಗಳಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ವ್ಯವಸ್ಥೆ ಇರಬೇಕು. ಸಾಮಾಜಿಕ ಅಂತರ ಕಾಪಾಡುದಲ್ಲಿ ದಂಡ ವಿಧಿಸಲಾಗುವುದು.
ಹೊರಗಡೆಯಿಂದ ಮೀನಿನ ವಾಹನ ಮತ್ತು ತರಕರಿ ವಾಹನ ಬರೋದನ್ನು ನಿಷೇಧಿಸಲಾಗಿದೆ.
ಹೊರ ಜಿಲ್ಲೆ ಹೊರರಾಜ್ಯದಿಂದ ವಿದೇಶದಿಂದ ಬಂದವರು ಹತ್ತು ದಿನ ಮನೆಯವರೆಲ್ಲ ಕಡ್ಡಾಯವಾಗಿ ಕ್ವಾರಂಟೈನ್ನಲ್ಲಿರಬೇಕು,ಕ್ವಾರಂಟೈನ್ ನಲ್ಲಿದ್ದವರು ಮನೆಯಿಂದ ಹೊರಗೆ ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು,
ಸಾಮಾಜಿಕ ಅಂತರ ಕಾಯ್ದುಕೊಂಡು ಅಂಗಡಿಗಳಲ್ಲಿ ವ್ಯಾಪರ ಮಾಡಿಕೊಳ್ಳಬೇಕು. ತಪ್ಪಿದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು.
ಇದು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹಾಗೂ ಮಾಸ್ಕ ಧರಿಸದೆ ಹೊರಗಡೆ ಇದ್ದಲ್ಲಿ ಫೋಟೋ ತೆಗೆದು ಈ ನಂಬರ್ 9880489220 ಕಳಿಸಿದರು ಅವರ ಮೇಲೆಯೂ ಕಾನೂನು ರೀತಿ ಕ್ರಮಕೈಗೊಳ್ಳಲು ಪಂಚಾಯ್ತಿ ನಿರ್ಧರಿಸಿದೆ.