fbpx

ತಲಪತಿ ವಿಜಯ್ ರಾಜಕೀಯ ಪ್ರವೇಶ ?!

ತಲೈವಾ ರಜನಿಕಾಂತ್ ಹಾಗೂ ಕಮಲ್ ಹಾಸನ್‌ ರಾಜಕೀಯಕ್ಕೆ ಎಂಟ್ರಿ ಕೊಡುವ ಸುದ್ದಿ ತಮಿಳುನಾಡಿನಲ್ಲಿ ಸದ್ದು ಮಾಡುತ್ತಿದೆ. ಆದರೆ, ರಜನೀಕಾಂತ್ ಅನಾರೋಗ್ಯದ ಕಾರಣ ಸಕ್ರಿಯ ರಾಜಕಾರಣಕ್ಕೆ ಬರುವ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಕಮಲ್ ಹಾಸನ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಖಚಿತ ಬಡಿಸಿದ್ದಾರೆ.

ಅತಿ ಹೆಚ್ಚು ರೀ-ಟ್ವೀಟ್ ಪಡೆದ ವಿಜಯ್ ದಳಪತಿ ಸೆಲ್ಫಿ ವಿತ್ ಫ್ಯಾನ್ಸ್!

ಖ್ಯಾತ ನಟ ವಿಜಯ್ ದಳಪತಿ ಸಹ ರಾಜಕೀಯಕ್ಕೆ ಬರಲಿದ್ದಾರೆಂದು ತಮಿಳರು ನಿರೀಕ್ಷಿಸುತ್ತಿದ್ದಾರೆ. ಈ ಬೆನ್ನಲ್ಲೇ ನವೆಂಬರ್ 5ಮರಂದು ರಾಜ್ಯದಲ್ಲಿ ವಿಜಯ್ ರಾಜಕೀಯಕ್ಕ ಪಕ್ಷವೊಂದನ್ನು ನೋಂದಣಿ ಮಾಡಿಸಿದ್ದಾಗಿ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತ್ತು. ಅವರೇ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. ವಿಜಯ್ ರಾಜಕೀಯಕ್ಕೆ ಎಂಟ್ರಿ ನೀಡಿದ್ದಾರೆ ಎಂಬ ವದಂತಿ ತೀವ್ರವಾದ ಹಿನ್ನೆಲೆಯಲ್ಲಿ ದಳಪತಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

‘ಆಲ್‌ ಇಂಡಿಯಾ ದಳಪತಿ ವಿಜಯ್ ಮಕ್ಕಲ್ ಇಯಾಕ್ಕಮ್’ ಹೆಸರಿನಲ್ಲಿ ಚುನಾವಣೆ ಆಯೋಗದಡಿ ಪಕ್ಷವನ್ನು ರಿಜಿಸ್ಟಾರ್ ಮಾಡಲಾಗಿದೆ ಅದಕ್ಕೆ ವಿಜಯ್ ತಂದೆ ಚಂದ್ರಶೇಖರ್ ಕಾರ್ಯದರ್ಶಿ ಹಾಗೂ ತಾಯಿ ಶೋಭಾ ಖಜಾಂಚಿ ಎಂದು ಹೇಳಲಾಗಿದೆ. ಈ ಪಕ್ಷದ ಮೂಲಕ ವಿಜಯ್ ಎಂಟ್ರಿ ಕೊಡಲಿದ್ದಾರೆ ಎಂಬ ಮಾತುಗಳು ಹೊರ ಬಂದಿತ್ತು. ಆದರೆ ಈ ವಿಚಾರದ ಬಗ್ಗೆ ವಿಜಯ್ ಮೌನ ಮುರಿದಿದ್ದಾರೆ.

ಅಯ್ಯೋ! ವಿಜಯ್‌ ದಳಪತಿ ಸಂಭಾವನೆ ಪಟ್ಟಿ ಬಿಚ್ಚಿಟ್ರಾ ಕನ್ನಡದ ನಟಿ?

‘ರಿಜಿಸ್ಟರ್ ಆಗಿರುವ ಪಕ್ಷಕ್ಕೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ಈ ಪಾರ್ಟಿ ಜೊತೆ ನನ್ನ ಹೆಸರು ಸೇರಿಸಿದ್ದರೆ ಹಾಗೂ ಫೋಟೋ ಬಳಸಿಕೊಂಡರೆ, ಅದು ತಪ್ಪು ದಾರಿಗೆ ಎಳೆದಂತೆ. ಇದರ ಬಗ್ಗೆ ನಾನು ಕ್ರಮ ಕೈಗೊಳ್ಳುವೆ. ನನ್ನ ತಂದೆ ಈ ಪಕ್ಷ ಸ್ಥಾಪಿಸಿರುವುದರ ಬಗ್ಗೆ ನನಗೆ ಮಾಧ್ಯಮಗಳಿಂದ ತಿಳಿದು ಬಂತು,’ ಎಂದು ವಿಜಯ್ ಹೇಳಿದ್ದಾರೆ.

‘ರಾಜಕೀಯಕ್ಕೆ ಎಂಟ್ರಿ ಕೊಡದಂತೆ ಮುಂದಿನ ದಿನಗಳಲ್ಲಿ ನಾನು ನಿರ್ಬಂಧ ಹಾಕಿಕೊಂಡಿರುತ್ತೇನೆ ಎಂದರ್ಥ ಅಲ್ಲ. ನನಗೆ ಬೇರೆ ಮಹತ್ವವಾದ ಕಾರ್ಯಗಳಿವೆ. ನನ್ನ ತಂದೆ ಪಕ್ಷ ಕಟ್ಟುತ್ತಿದ್ದಾರೆ. ಪಾರ್ಟಿಗೆ ಸೇರೋದು, ಪಕ್ಷಕ್ಕಾಗಿ ದುಡಿಯೋದು ಮಾಡಬೇಡಿ. ನಾನದರಲ್ಲಿ ಇರುವುದಿಲ್ಲ. ನನ್ನ ಅಭಿಮಾನಿಗಳಿಗೆ ತಿಳಿಸುತ್ತಿರುವೆ, ನನಗೂ ನಮ್ಮ ತಂದೆ ನೋಂದಣಿ ಮಾಡಿಸಿರುವ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ,’ ಎಂದು ಸ್ಪಷ್ಟಪಡಿಸಿದ್ದಾರೆ.

error: Content is protected !!