fbpx

ತಲಕಾವೇರಿ ತಲುಪಿದ ನಾರಾಯಣ ಆಚಾರ್ ಪುತ್ರಿಯರಾದ ಶಾರದಾ ಮತ್ತು ನಮಿತಾ

ಆಸ್ಟೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಲ್ಲಿ ನೆಲಸಿದ್ದ ಪುತ್ರಿಯರು – ತಂದೆ,ತಾಯಿ, ದೊಡ್ಡಪ್ಪ ಭೂಸಮಾಧಿ ಸುದ್ದಿ ತಿಳಿದು ತವರಿಗೆ ಆಗಮನ. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಂದ ಘಟನೆ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು.

ಪ್ರತೀ ದಿನ ಅಪ್ಪ ಅಮ್ಮನೊಂದಿಗೆ ಮಾತನಾಡುತ್ತಿದ್ದೆವು – ಘಟನೆಯಿಂದ ಆಘಾತವಾಗಿದೆ ಎಂದು ಶಾರದಾ ಪ್ರತಿಕ್ರಿಯೆ. ನಾರಾಯಣಾಚಾರ್ ಕಣ್ಮರೆ ಬಳಿಕ ಕಾವೇರಿ ಸನ್ನಿಧಿಯಲ್ಲಿ 5 ದಿನಗಳಿಂದ ನಡೆಯದ ಪೂಜೆ. ಕಾವೇರಿ ಸನ್ನಿಧಿಯಲ್ಲಿ ಪೂಜಾಕೈಂಕಯ೯ವೇ ಸ್ಥಗಿತ – ಆದಷ್ಟು ಬೇಗ ಪೂಜಾಕಾಯ೯ ಪ್ರಾರಂಭಿಸಲು ಸಿದ್ದತೆ. ಬಿಕೋ ಎನ್ನುತ್ತಿರುವ ಕಾವೇರಿ ಪವಿತ್ರ ಕ್ಷೇತ್ರ

error: Content is protected !!