fbpx

ತಲಕಾವೇರಿಯಲ್ಲಿ ಮಡಿಕೇರಿ ಗ್ರಾಮಂತರ ಯುವ ಮೋರ್ಚಾದ ವತಿಯಿಂದ ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜೆ ಹಾಗು ಸ್ವಚ್ಛತಾ ಕಾರ್ಯಕ್ರಮ

ಮಡಿಕೇರಿ ಗ್ರಾಮಾಂತರ ಯುವಮೋರ್ಚದ ವತಿಯಿಂದ ಯುವ ಮೋರ್ಚಾದ ಅಧ್ಯಕ್ಷರಾದ ಹೇಮಂತ್ ತೋರೆರ ಅವರ ನೇತೃತ್ವದಲ್ಲಿ, ಸ್ಥಳೀಯರ ಸಹಕಾರದೊಂದಿಗೆ ತಲಕಾವೇರಿ ಮತ್ತು ಭಾಗಮಂಡಲದ ಭಗಂಡೇಶ್ವರ ಸನ್ನಿಧಿಯಲ್ಲಿ ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ ತಲಕಾವೇರಿ ಪುಣ್ಯಕ್ಷೇತ್ರ ದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ನಮ್ಮೊಳಗಿನ ರಕ್ತದ ಬಣ್ಣ ಒಂದೆ, ಆಡುವ ಉಸಿರು ಒಂದೆ, ಪೂಜಿಸುವ ದೇವನು ಒಂದೆ ನಾಮ ಹಲವಷ್ಟೆ ಎಂದು ಎಲ್ಲಾ ಜಾತಿ ಜನಾಂಗದ ಯುವಕರು ಸೇರಿ ಈ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೊದಲಿಗೆ ಭಾಗಮಂಡಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ತಲಕಾವೇರಿಗೆ ತೆರಳಿ ಅಲ್ಲಿ ಸ್ವಚ್ಚ ಮಾಡಿ ಅಲ್ಲಿರುವ ಅಂಗಡಿ ಮಾಲಿಕರುಗಳಿಗೆ ಕಸ, ಟೀ,ಕಾಫಿ ಕಪ್, ನೀರಿನ ಬಾಟಲ್, ಜೂಸ್ ಪ್ಯಾಕೆಟ್ ಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ, ದೇವಲಯದ ಪವಿತ್ರ ಭೂಮಿಯಲ್ಲಿ ಸ್ವಚ್ಚತೆ ಕಾಪಾಡುವಂತೆ ಮನವಿ ಮಾಡಿಕೊಳ್ಳಲಾಯಿತು.

ನಂತರ ತಲಕಾವೇರಿಯಲ್ಲಿ ಯುವ
ಮೋರ್ಚಾದ ಸಭೆ ಸರಳವಾಗಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ತಾಲೂಕು ಗ್ರಾಮಾಂತರ ಯುವ ಮೋರ್ಚಾದ ಅಧ್ಯಕ್ಷರಾದ ಹೇಮಂತ್ ತೋರೆರ ವಹಿಸಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ದೇವಲಯದ ಅಡಳಿತ ಮಂಡಳಿಯ ಮಾಜಿ ಸದಸ್ಯರಾದ ಮನೋಜ್ ಕುಮಾರ್ ಕುಯ್ಯಮುಡಿ ಅವರು
ಇಂದು ನಮ್ಮ ಮುಂದೆ ಸಾಮಾಜಿಕ, ಪ್ರಾಕೃತಿಕ ಸಮಸ್ಯೆಗಳು ಅದೆಷ್ಟೋ ಇದೆ. ಅಂತಹದರಲ್ಲಿ ಇಂದು ಜಾತಿ-ಮತದ ಸಮಸ್ಯೆ ದೊಡ್ಡದಾಗಿ ಪರಿಣಮಿಸಿದೆ. ಎಲ್ಲರೂ ಒಂದೇ ಎನ್ನುವ ಭಾವವನ್ನು‌ ನಾವೆಲ್ಲ ಹೊಂದಿ ಒಗ್ಗಟ್ಟಿನಿಂದ ಬಾಳಿದರೆ ನಮ್ಮ ಸಮಾಜ ಅತ್ಯಂತ ಶಾಂತಿ ನೆಮ್ಮದಿಯಿಂದ ಕೂಡಿರುತ್ತದೆ.
ಪೂಜಿಸುವ ಯಾವುದೇ ದೇವರು ಕೂಡ ನೀನು ಬೇಡ ಎನ್ನುವುದಿಲ್ಲ. ಎಲ್ಲರನ್ನೂ ಸಮಾನವಾಗಿ ಸ್ವೀಕರಿಸುತ್ತಾನೆ, ಆದರೆ ಇದೀಗ ಈ ಪುಣ್ಯಕ್ಷೇತ್ರ ದಲ್ಲಿ ಕೆಲವರಿಂದ ಗೊಂದಲ್ಲ ಉಂಟಾಗಿರುವುದು ವಿಷದನೀಯ. ಆದರೆ ಈ ಸಮಯದಲ್ಲಿ ಎಲ್ಲಾ ಜನಾಂಗದ ತರುಣರೆಲ್ಲ ಸೇರಿ ನಾವೆಲ್ಲಾರು ಒಂದೆ ಧರ್ಮದವರೇಬ ಭಾವನೆಯೊಂದಿಗೆ ಈ ಪುಣ್ಯಕ್ಷೇತ್ರದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅತ್ಯಂತ ಸಂತೋಷದ ವಿಚಾರವಾಗಿದ್ದು ಇದು ಇಲ್ಲಿಗೆ ಕೊನೆಗೊಳ್ಳದೆ ಇಡಿ ಜಿಲ್ಲಾಂದ್ಯಾಂತ ಹಳ್ಳಿ ಹಳ್ಳಿಗಳಿಗು ಈ ಸ್ವಚ್ಚತಾ ಪ್ರಾಮುಖ್ಯತೆಯನ್ನು ಮನವರಿಕೆ ಮಾಡಿಕೊಡಬೇಕು ಹಾಗು ಒಗ್ಗಟ್ಟಿನ ಬಲವಿದೆ ಎಂದು ತಿಳಿಸಬೇಕೆಂದು ಯುವ ಮೋರ್ಚಾದ ಸರ್ವ ಪಧಧಿಕಾರಿಗಳಿಗೆ ಕಿವಿಮಾತು ಹೇಳಿದರು. ನಂತರ ಮಾತನಾಡಿದ ಮಹಾಶಕ್ತಿ ಕೇಂದ್ರದ ಪ್ರಮುಖ್ ಕುದುಪಜೆ ಪುರುಷೋತ್ತಮರವರು ಯುವ ಮೋರ್ಚಾದ ಸ್ವಚ್ಚತಾ ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿ, ಮುಂದೆ ಇನ್ನು ಇಂತಹ ಹೆಚ್ಚಿನ ಕಾರ್ಯಕ್ರಮಗಳನ್ನು ದೊಡ್ಡ ಮಟ್ಟದಲ್ಲಿ ನಡೆಸಬೇಕೆಂದು ತಿಳಿ ಹೇಳಿದರು. ನಂತರ ಮಾತನಾಡಿದ ಎಸ್ ಟಿ ಮೋರ್ಚಾದ ಅಧ್ಯಕ್ಷರಾದ ಮಿಟ್ಟು ರಂಜಿತ್ ರವರು ಯುವ ಮೋರ್ಚಾದ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಮುಂದಿನ ಕಾರ್ಯಕ್ರಮವು ಭಾಗಮಂಡಲದಲ್ಲು ನಡೆಸಬೇಕು ಹಾಗೆ ಯುವ ಮೋರ್ಚಾವು ಮತ್ತಷ್ಟು ಕೆಲಸ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜನರ ಮನದಲ್ಲಿ ಉಳಿಯುವಂತೆ ಅಗ ಬೇಕು, ಸ್ವಚ್ಚತೆಯೆಂಬುದು ಒಂದು ದಿನದ ಮಾತಲ್ಲ ಇದು ಇಡಿ ಜೀವನದ ಭಾಗವಾಗ ಬೇಕು ಎಂದು ಕಿವಿಮಾತು ಹೇಳಿದರು. ಈ ಸ್ವಚ್ಚತಾ ಕಾರ್ಯಕ್ರಮದ ಜವಾಬ್ದಾರಿಯನ್ನು ಭಾಗಮಂಡಲ ಪಂಚಾಯತಿ ಮಾಜಿ ಸದಸ್ಯರಾದ ರಾಜ ರೈ ಹಾಗು ಯುವ ಮೋರ್ಚಾದ ಪಧದಿಕಾರಿಯಾದ ವಿನೋದ್ ಚೇದ್ಕಾರ್ ಹೊತ್ತಿದ್ದರು. ಈ ಕಾರ್ಯಕ್ರಮದಲ್ಲಿ ಭಾಗಮಂಡಲ ಶಕ್ತಿ ಕೇಂದ್ರದ ಸಹಪ್ರಮುಖ್ ಚಲನ್ ನಿಡ್ಯಮಲೆ, ಮಾಜಿ ಅಧ್ಯಕ್ಷರಾದ ಅಮ್ಮೆ ಪದ್ಮಯ್ಯ, ಸಂಚಲಾಕರಾದ ಸಂಜು ಪಟ್ಟಮಾಡ, ಯುವ ಮೋರ್ಚಾದ ಪಧದಿಕಾರಿಗಳು‌ ಹಾಗು ಸದಸ್ಯರು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು, ಸ್ಥಳೀಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಯುವ‌ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಹೇಶ್ ಮೂಲೆಜಲು ಮಾಡಿದರು, ವಂದನಾರ್ಪಾಣಿಯನ್ನು ಚೇತನ್ ಕೂಡಕಂಡಿ ಮಾಡಿದರು.

error: Content is protected !!