fbpx

ತಲಕಾವೇರಿಯಲ್ಲಿ ನಡೆಯುವ ಪವಿತ್ರ ತೀರ್ಥೋದ್ಭವ ಸಂದರ್ಭ ನಿರ್ಬಂಧ ಹೇರಿರುವುದು ಸರಿಯಲ್ಲ

ವರ್ಷಕ್ಕೊಮ್ಮೆ ತಲಕಾವೇರಿಯಲ್ಲಿ ನಡೆಯುವ ಪವಿತ್ರ ತೀರ್ಥೋದ್ಭವ ಸಂದರ್ಭದಲ್ಲಿ ಕೊಡಗಿನ ಭಕ್ತಾದಿಗಳಿಗೆ ಕೋವಿಂದ್ ನೆಪವೊಡ್ಡಿ ನಿರ್ಬಂಧ ಹೇರಿರುವುದು ಸರಿಯಲ್ಲ ಎಂದು ಕೊಡಗು ಯುವಸೇನೆ ಅಭಿಪ್ರಾಯ ಪಟ್ಟಿದೆ.

ವರ್ಷಕ್ಕೊಮ್ಮೆ ತೀರ್ಥ ಸ್ವರೂಪಿಣಿಯಾಗಿ ಉದ್ಭವಿಸುವ ಕಾವೇರಿ ಮಾತೆಯನ್ನು ಕಣ್ತುಂಬಿಕೊಳ್ಳಲು ಭಕ್ತರು ಭಾವಪರವಶ ದೊಂದಿಗೆ ಪ್ರತಿವರ್ಷ ಕಾಯುತ್ತಿರುತ್ತಾರೆ.ಎಲ್ಲೆಡೆ ವಿಜೃಂಭಣೆಯಿಂದ ವಿವಿಧ ಕಾರ್ಯಕ್ರಮಗಳು ನಡೆಯುತ್ತಿರುವಾಗ ಕೋರೊನ ನೆಪವೊಡ್ಡಿ ಕೊಡಗಿನಲ್ಲಿ ಮಾತ್ರ ನಡೆಯುವ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗುತ್ತಿದೆ.ಕೊರನ ಹರಡದಂತೆ ಮುನ್ನೆಚ್ಚರಿಕೆ ವಹಿಸದಿರುವುದು ಉತ್ತಮವೇ ಆದರೆ ಎಲ್ಲೆಡೆ ವಿಜೃಂಭಣೆಯಿಂದ ಕಾರ್ಯಕ್ರಮ ನಡೆಯುವಾಗ ಕೊಡಗಿನಲ್ಲಿ ಮಾತ್ರ ಈ ನಿರ್ಬಂಧವನ್ನು ಏರುತ್ತಿರುವುದು ಕೊಡುಗು ಯುವ ಸೇನೆ ವಿರೋಧ ವ್ಯಕ್ತಪಡಿಸುತ್ತದೆ. ರಾಜ್ಯ ಸರ್ಕಾರ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಈ ಬಗ್ಗೆ ಪುನರ್ ಪರಿಶೀಲಿಸಿ ಭಕ್ತರ ಮನಸ್ಸಿಗೆ ನೋವಾಗದಂತೆ ಕ್ರಮಕೈಗೊಳ್ಳಬೇಕೆಂದು ಕೊಡಗು ಯುವ ಸೇನೆಯ ಪ್ರಮುಖರಾದ ಕುಲದೀಪ್ ಪೂಣಚ್ಚ ಜಿಲ್ಲಾ ಸಂಚಾಲಕರಾದ ಮಾಚೆಟ್ಟಿರ ಸಚಿನ್ ಮಂದಣ್ಣ ಈ ಮೂಲಕ ಒತ್ತಾಯಿಸಿದ್ದಾರೆ.

error: Content is protected !!