ತರಕಾರಿ ಲಾರಿಯಲ್ಲಿ ಅಕ್ರಮ ಮರ ಸಾಗಾಟ

ತರಕಾರಿ ತುಂಬಿದ ಲಾರಿಯಲ್ಲಿ ಅಕ್ರಮವಾಗಿ ಬೀಟೆ ಮರದ ನಾಟಾಗಳನ್ನು ಸಾಗಿಸುತ್ತಿದ್ದ ವೇಳೆ ಸಂಪಾಜೆ ಚೆಕ್ ಪೋಸ್ಟ್ ಬಳಿ ಅರಣ್ಯ ಇಲಾಖೆ ದಾಳಿ ನಡೆಸಿ 23 ಲಕ್ಷ ಮೌಲ್ಯದ ಮರ ವಶಕ್ಕೆ ಪಡೆದು ಕೇರಳದ ಕಾನಂಗಾಡ್ ನಿವಾಸಿಯಾದ ಪಿ.ದನೇಶ್ 28,ಕಣ್ಣೂರು ನಿವಾಸಿ ಎಂ.ರಾಹುಲ್ ನನ್ನು ಬಂಧಿಸಿದ್ದು ಪ್ರಮುಖ ಆರೋಪಿ ವಿರಾಜಪೇಟೆಯ ಅಶ್ರಫ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ.
ಹುಣಸೂರಿನಿಂದ ಕೇರಳದ ಕಾನಂಗಾಡಿಗೆ ಮರ ಸಾಗಿಸಲಾಗಿದ್ದು,ಪ್ರಾದೇಶಿಕ ವಲಯ ವ್ಯಾಪ್ತಿಯ ಅರಣ್ಯ ತನಿಖಾ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.