ತನಿಖೆ ಚುರುಕು

ಕೊಡಗು(ಸಂಪಾಜೆ): ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಕೊಲೆ ಸಂಬಂಧ ಕೃತ್ಯ ವೆಸಗಲಾಗಿದೆ ಎಂದು ಆರೋಪವಿದ್ದ ಸಂಪತ್ ಕುಮಾರ್ ಹತ್ಯೆ ಪ್ರಕರಣ ತನಿಖೆ ಚುರುಕುಗೊಂಡಿದೆ.

ಸಂಪತ್ ಹಂತಕರ ಸುಳಿವು ಸಿಕ್ಕಿದ್ದು ದುಷ್ಕೃತ್ಯಕ್ಕೆ ಬಳಸಿದ ಕಾರು ಸುಳ್ಯ ಸಮೀಪದ ಕೃಷಿಕ ಪದ್ಮನಾಭರ ಕ್ವಾಲಿಸ್ ಕಾರನ್ನು ವಶಕ್ಕೆ ಪಡೆಯಲಾಗಿದೆ. ಕಲ್ಲುಗುಂಡಿಯ ನಿವಾಸಿ ಮನೋಹರ್ ಎಂಬಾತ ಖಾಸಗಿ ಕೆಲಸಕ್ಕೆ ಪದ್ಮನಾಭನವರ ಕಾರನ್ನು ವಿಶ್ವಾಸದ ಮೇಲೆ ಪಡೆದುಕೊಂಡಿದ್ದು ,ಇದೇ ಕಾರು ಹತ್ಯೆಗೆ ಈಡಾದ ಸಂಪತ್ ಕುಮಾರ್ ರ ಚಲನವಲನ ಮೇಲೆ ನಿಗಾ ಇಡಲು ಗ್ರಾಮದಲ್ಲಿ ಓಡಾಡಿರುವ ಬಗ್ಗೆ ಗ್ರಾಮಸ್ಥರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಎರಡು ಪ್ರತ್ಯೇಕ ತಂಡವನ್ನು ರಚಿಸಿರುವ ದಕ್ಷಿಣ ಕನ್ನಡ ಎಸ್ಪಿ ಲಕ್ಷ್ಮಿ ಪ್ರಸಾದ್ ತನಿಖೆ ನಡೆಸುತ್ತಿದ್ದು,ಕಾರು ಅರಂತೋಡಿನ ಬಾಬುಗೌಡ ಎಂಬುವವರ ರಬ್ಬರ್ ತೋಟದಲ್ಲಿ ಪತ್ತೆಯಾಗಿದೆ.

ಜೊತೆಗೆ ಕೃತ್ಯಕ್ಕೆ ಬಳಸಿದ ಕೋವಿಯ ಬಗ್ಗೆ ಸಹ ತನಿಖೆ ನಡೆಸಲಾಗುತ್ತಿದೆ.