ತಖ್ತೇ ಅಬ್ಬರಕ್ಕೆ ಕಡಲದಡಿ ಪ್ರದೇಶ ತತ್ತರ

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಎದ್ದಿರುವ ತೌಖ್ತೆ ಚಂಡಮಾರುತದ ಅಬ್ಬರಕ್ಕೆ ಕಡಲ ಪ್ರದೇಶಗಳು ತತ್ತರಿಸಿದೆ. ಉಚ್ಚಿಲ ಕುದ್ರುವಿನಲ್ಲಿ ನೋಡನೋಡುತ್ತಿದ್ದಂತೆ ಮನೆಗಳು ನೆಲಕಚ್ಚುತ್ತಿವೆ, ಸಮುದ್ರದ ನೀರು ಸುಮಾರು 30 ಕಿಲೋಮೀಟರ್ ವರೆಗೂ ನೀರು ನುಗ್ಗಿ ಪ್ರವಾಹ ಭೀತಿ ಉಂಟುಮಾಡಿದೆ.ನಂದಿನಿ ಮತ್ತು ಶಾಂಭವಿ ನದಿಗಳು ಸಮುದ್ರಕ್ಕೆ ಸೇರುವ ಪ್ರದೇಶದಲ್ಲಿ ಮನೆಮಠ ತೊರೆದು ಸುರಕ್ಷಿತ ಪ್ರದೇಶಕ್ಕೆ ತೆರಳಿದ್ದಾರೆ. ಸೋಮೇಶ್ವರ ದೇವಾಲಯ ಸಮೀಪದಲ್ಲಿ ಅಕ್ರಮ ಮರಳುಗಾರಿಕೆ ಪರಿಣಾಮ ತಡೆಗೋಡೆ ಮುರಿದು ನೀರು ಒಳನುಗ್ಗಿದ್ದು ಸ್ಮಶಾನವೊಂದು ಕೊಚ್ಚಿ ಹೋಗಿದೆ.

ಕೇರಳ ವರದಿ: ಇತ್ತ ಕೇರಳದ ಕಡಲ ಪ್ರದೇಶದಲ್ಲಿ ಚಂಡಮಾರುತ ವೇಗವಾಗಿ ಬೀಯಸುತ್ತಿದ್ದು ಸಮುದ್ರದ ಅಲೆಗಳು ಅಬ್ಬರಿಸಿ ಮುಂದಿನ ಎರಡು ದಿನಗಳಲ್ಲಿ ಸಂಭವಿಸುವ ಅಪಾಯದ ಸೂಚನೆ ನೀಡುತ್ತಿದೆ.

error: Content is protected !!