fbpx

ತಂದೆ ಸೋಫಾ ಸೆಟ್ ಕೊಡಿಸಲಿಲ್ಲ ಎಂದು ನವವಿವಾಹಿತೆ ಆತ್ಮಹತ್ಯೆ

ಬೆಳಗಾವಿ: ತಂದೆ ಸೋಫಾ ಸೆಟ್ ಕೊಡಿಸಲಿಲ್ಲ ಎಂದು ಮನನೊಂದು 19 ವರ್ಷದ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದಲ್ಲಿ ನಡೆದಿದೆ. 19 ವರ್ಷದ ಜ್ಯೋತಿ ನಿಖಿಲ್ ಚೋಪಡೆ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ.

ಐದು ತಿಂಗಳ ಹಿಂದೆಯಷ್ಟೇ ಉಚಗಾಂವ ಗ್ರಾಮದ ನಿಖಿಲ್ ಎಂಬುವನನ್ನು ಪ್ರೀತಿಸಿ ಜ್ಯೋತಿ ವಿವಾಹವಾಗಿದ್ದಳು. ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಗಂಡನ ಮನೆ ಉಚಗಾಂವನಿಂದ ತವರು ಮನೆಗೆ ಬಂದಿದ್ದ ಜ್ಯೋತಿ ತನಗೆ ಸೋಫಾ ಸೆಟ್ ಕೊಡಿಸುವಂತೆ ಹಠ ಹಿಡಿದಿದ್ದಳು. ಇತ್ತಿಚೆಗಷ್ಟೇ ತಂದೆಯಿಂದ ಕಾಡಿ ಬೇಡಿ ಫ್ರಿಡ್ಜ್ ತರಿಸಿಕೊಂಡಿದ್ದ ಜ್ಯೋತಿ ನನಗೆ ಸೋಫಾಸೆಟ್ ಬೇಕು ಅಂತಾ ಹಠ ಹಿಡಿದಿದ್ದಳಂತೆ. ಇದಕ್ಕೆ ಆಕೆಯ ತಂದೆ ಹಣ ಬಂದ ಮೇಲೆ ಕೊಡಿಸುವುದಾಗಿ ಹೇಳಿದ್ದರು. ಆದರೆ ತಾಳ್ಮೆ ಕಳೆದುಕೊಂಡ ಜ್ಯೋತಿ ‌ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾಕತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

error: Content is protected !!