ಡಿ.ಸಿ.ಸಿ. ಅಧ್ಯಕ್ಷ ಸ್ಥಾನಕ್ಕೆ ಸಾಲು ಸಾಲು ಆಕಾಂಕ್ಷಿಗಳು:ತಿಂಗಳ ಅಂತ್ಯಕ್ಕೆ ನೇಮಕ ಸಾಧ್ಯತೆ

ಕೊಡಗು: ಜಿಲ್ಲಾ ಕಾಂಗ್ರೆಸ್ ಸಮಿತಿಯ (ಡಿ.ಸಿ.ಸಿ.)ಅಧ್ಯಕ್ಷ ಸ್ಥಾನಕ್ಕೆ ಕೆ.ಕೆ ಮಂಜುನಾಥ್ ರಾಜೀನಾಮೆ ಸಲ್ಲಿಸುತ್ತಿದ್ದಂತೆ ಜಿಲ್ಲೆಯಲ್ಲಿ ಕಾಂಗ್ರೆಸ್ ಚುಕ್ಕಾಣಿ ಹಿಡಿಯಲು ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲಿದ್ದು,ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ‌.ಕೆ.ಶಿವಕುಮಾರ್ ಒಂದು ಸುತ್ತು ಮಾತುಕತೆ ನಡೆಸಿದ್ದಾರೆ.

ಕಾಂಗ್ರೆಸ್ ನ ಹಿರಿಯ ನಾಯಕರು ತಮ್ಮ ಬೆಂಬಲಿತ ಆಕಾಂಕ್ಷಿಗಳ ಹೆಸರುಗಳನ್ನು ಕೆಪಿಸಿಸಿಗೆ ಶಿಫಾರಸ್ಸು ಮಾಡಿದರೆ,ಇನ್ನೊಂದೆಡೆ ನೇರವಾಗಿಯೇ ಡಿಕೆಶಿರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದ್ದು ಆಯ್ಕೆ ಪ್ರಕ್ರಿಯೆ ಕಠಿಣವಾಗುತ್ತಿದ್ದು ಕಾಂಗ್ರೆಸ್ ಮುಖಂಡರಲ್ಲಿ ಪ್ರಮುಖರ ಸಮ್ಮುಖದಲ್ಲಿ ಚರ್ಚೆಗಳು ನಡೆದಿದೆ.

ಸೋಮವಾರಪೇಟೆ ತಾಲ್ಲೂಕಿನಿಂದ ಕೆ.ಎಂ ಲೋಕೇಶ್,ನಾಪಂಡ ಮುತ್ತಪ್ಪ, ಕುಶಾಲನಗರದ ಮಂಜುನಾಥ್ ಗುಂಡುರಾವ್ ,ವಿರಾಜಪೇಟೆ ತಾಲ್ಲೂಕಿನಿಂದ ಧರ್ಮಜ ಉತ್ತಪ್ಪ,ಸರಿತಾ ಪೂಣಚ್ಚ,ಹರೀಶ್ ಬೋಪಣ್ಣ,ಮಡಿಕೇರಿ ತಾಲ್ಲೂಕಿನಿಂದ ಮಕ್ಕಂದೂರಿನ ಸುಜು ತಿಮ್ಮಯ್ಯರ ಪ್ರಬಲವಾಗಿ ಕೇಳಿ ಬಂದಿದ್ದು ಇವರೊಂದಿಗೆ ಡಿಕೆಶಿ ಚರ್ಚೆ ನಡೆಸಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಕಾಂಗ್ರೆಸ್ ಮೂಲೆಗುಂಪಾಗಿರುವ ಹಿನ್ನಲೆಯಲ್ಲಿ ಮತ್ತೆ ಪಕ್ಷವನ್ನು ಕಟ್ಟಲು ಸ್ಥಳೀಯರಿಂದ ಸಾಧ್ಯ,ಹೊರ ಜಿಲ್ಲೆಗಳ ಆಕಾಂಕ್ಷಿಗಳಿಗೆ ಆಧ್ಯತೆ ನೀಡಬೇಕಾಗಿದ್ದು, ಜಿಲ್ಲಾ ಪ್ರವಾಸದ ಹೆಸರಿನಲ್ಲಿ ಕೆಲವು ನಾಯಕರು ಆಗಮಿಸಿ ಪಕ್ಷದ ಮುಖಂಡರೆಂದು ಬಿಂಬಿಸಿಕೊಳ್ಳುತ್ತಿದ್ದಾರೆ ಇದಕ್ಕೆ ಕಡಿವಾಣ ಹಾಕಬೇಕಿದೆ ಎನ್ನುವ ಅಭಿಪ್ರಾಯ ಕೇಳಿ ಬಂದಿದ್ದು,ಮುಂದಿನ ಜಿಲ್ಲಾ ಪಂಚಾಯ್ತಿ,ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವ ಭರವಸೆಯನ್ನು ಎಲ್ಲಾ ಆಕಾಂಕ್ಷಿಗಳು ನೀಡಿದ್ದಾರೆ ಎನ್ನಲಾಗಿದೆ. ಆದರೆ ಪುಟ್ಟ ಜಿಲ್ಲೆ ಕೊಡಗಿನ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ಏರುತ್ತಲೇ ಇದ್ದು,ಯಾವ ಮಾನದಂಡದಲ್ಲಿ
ಆಯ್ಕೆ ನಡೆಯುತ್ತದೆ, ಮಹಿಳೆ, ಅಲ್ಪಸಂಖ್ಯಾತ, ಪ್ರಭಾವಿ,ಶಿಫಾರಸ್ಸಿನಿಂದ ಆಯ್ಕೆ ಸಮಿತಿಗೆ ಆರಂಭದಲ್ಲೇ ಕಬ್ಬಿಣದ ಕಡಲೆಯಾಗಿದೆ.

error: Content is protected !!