ಡಿಸಂಬರ್ 24 ರಿಂದ ಕೊಡಗಿನಲ್ಲಿ “ಯೋಧ ನಮನಂ”

ಬಿಪಿನ್ ರಾವತ್ ರ ಪ್ರತಿಮೆ ಹೊತ್ತು ಶ್ರದ್ದಾಂಜಲಿ ರಥ ಯಾತ್ರೆ
ಹೆಲಿಕಾಪ್ಟರ್ ದುರಂತದಲ್ಲಿ ಸಾವನಪ್ಪಿದ ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಹಾಗು ಇತರೆ ಯೋಧರಿಗೆ ಗೌರವಪೂರ್ವಕ ನಮನ ಸಲ್ಲಿಸುವ ಸಲುವಾಗಿ ಕೊಡಗಿನ ಪ್ರತೀ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ವಿಶೇಷ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಹಿಂದು ಜಾಗರಣ ವೇದಿಕೆ ಹಮ್ಮಿಕೊಂಡಿದೆ.
ಯೋಧ ನಮನಂ ಹೆಸರಿನಲ್ಲಿ ವೇದಿಕೆಯ ಯುವ ಘಟಕ ಡಿಸಂಬರ್ 24 ರಂದು ಮಡಿಕೇರಿಯ ಓಂಕಾರೇಶ್ವರ ದೇವಾಲಯದಿಂದ ವಿಶೇಷ ಪೂಜೆಯೊಂದಿಗೆ ಆರಂಭಗೊಂಡು ಹತ್ತು ದಿನಗಳವರೆಗೆ ಜಿಲ್ಲೆಯಾದ್ಯಂತ ಯೋಧರ ತ್ಯಾಗ, ಬಲಿದಾನ ಕುರಿತು ಯಾತ್ರೆ ನಡೆಯಲಿದೆ.
ಇದೇ ವೇಳೆ ಯಾತ್ರೆಯಲ್ಲಿ ಬಿಪಿನ್ ರಾವತ್ ರ ಪ್ರತಿಮೆಗೆ ಪುಷ್ಪ ನಮನ ಮಾಡಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗುವುದು. ಸದ್ಯ ರಾವತ್ ಪ್ರತಿಮೆ ಭಟ್ಕಳ ದ ಸುದರ್ಶನ್ ಮತ್ತು ನಿರಂಜನ್ ಕಲಾವಿದರು ನಿರ್ಮಾಣ ಮಾಡುತ್ತಿದ್ದಾರೆ