ಡಿಎಪಿ ಮೇಲಿನ ಸಬ್ಸಿಡಿ ಹೆಚ್ಚಿಸಿ ರೈತರಿಗೆ ಕೇಂದ್ರ ಸರಕಾರದ ನೆರವು

ನವದೆಹಲಿ: ಸಂಕಷ್ಟದಲ್ಲಿದ್ದ ರೈತರ ನೆರವಿಗೆ ಸರ್ಕಾರ ಧಾವಿಸಿದ್ದು, ರಸಗೊಬ್ಬರ ಸಬ್ಸಿಡಿ ಹೆಚ್ಚಲ ಮಾಡಲಾಗಿದೆ. ಮುಂಗಾರಿಗೆ ಮೊದಲು ರಸಗೊಬ್ಬರಕ್ಕೆ ಕೇಂದ್ರದಿಂದ ಬಂಪರ್ ಸಬ್ಸಿಡಿ ಪ್ರಕಟಿಸಲಾಗಿದೆ. ಕಳೆದ ವರ್ಷದಂತೆಯೇ 1200 ರೂ.ಗೆ ಡಿಎಪಿ ಲಭ್ಯವಾಗಲಿದೆ.

ಕೊರೋನಾ ಕಾರಣದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಅನುಕೂಲವಾಗುವಂತರ ಕೇಂದ್ರ ಸರ್ಕಾರ ಸಬ್ಸಿಡಿ ಹೆಚ್ಚಳ ಘೋಷಿಸಿದೆ. ಡಿಎಪಿ ರಸಗೊಬ್ಬರದ ಸಬ್ಸಿಡಿಯನ್ನು ಶೇಕಡ 140 ರಷ್ಟು ಹೆಚ್ಚಳ ಮಾಡಲಾಗಿದೆ.

ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ರಸಗೊಬ್ಬರ ಬೆಲೆಯನ್ನು 1700 ರೂ.ನಿಂದ 2400 ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಶೇಕಡ 140 ರಷ್ಟು ದರ ಹೆಚ್ಚಳವಾಗಿ ರೈತರಿಗೆ ಹೊರೆಯಾಗಿ ರೈತರಿಗೆ ಆತಂಕ ಎದುರಾಗಿತ್ತು.

ಮುಂಗಾರು ಹಂಗಾಮಿಗೆ ಮೊದಲು ರೈತರಿಗೆ ಕೊಡುಗೆ ನೀಡಲಾಗಿದ್ದು, ಡಿಎಪಿ ಚೀಲದ ಮೇಲಿನ ಸಬ್ಸಿಡಿಯನ್ನು 500 ರೂ.ನಿಂದ 1200 ರೂ.ಗೆ ಏರಿಕೆ ಮಾಡಿ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದಾಗಿ ಈ ಮೊದಲು ಇದ್ದ ದರದಲ್ಲಿಯೇ ರೈತರಿಗೆ ಗೊಬ್ಬರ ಸಿಗಲಿದೆ.

error: Content is protected !!