ಟ್ರಾಕ್ಟರ್ ಮಗುಚಿ ಯುವಕ ಸಾವು

ಕುಶಾಲನಗರದ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಭುವನಗಿರಿಯಲ್ಲಿ ಟ್ರಾಕ್ಟರ್ ಮಗುಚಿ ಬಿದ್ದ ಪರಿಣಾಮ 21 ವರ್ಷದ ಶಿವರಾಜು ಎಂಬಾತ ಮೃತಪಟ್ಟ ಘಟನೆ ನಡೆದಿದೆ.

ಕುಶಾಲನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಶಿವರಾಜು, ಗ್ರಾಮದವರು ಆದ ಶಶಿಧರ್ ಎಂಬುವವರ ಟ್ರಾಕ್ಟರ್ ಪಡೆದು ಓಡಿಸುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿದ ಪರಿಣಾಮ ಮಗುಚಿಕೊಂಡಿದ್ದು, ಶಿವರಾಜು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ .ಘಟನೆ ಸಂಬಂಧ ಕುಶಾಲನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!