ಟೋಕಿಯೋ ಒಲಂಪಿಕ್ಸ್, ಕೊಡಗಿನ ಇತರೆ ಕ್ರೀಡಾಪಟುಗಳನ್ನು ಗುರುತಿಸಿ: ಕೊಡವಾಮೆ ಕ್ರೀಡಾ ಸಚಿವರಿಗೆ ಮನವಿ

ಟೋಕಿಯೋ ಒಲಂಪಿಕ್ಸ್ ನಲ್ಲಿ ಪಾಲ್ಗೊಂಡ ಕೊಡಗು ಮೂಲದ ಕ್ರೀಡಾಪಟುಗಳ ನಿರ್ಲಕ್ಷ್ಯ ವಹಿಸಿರುವುದಕ್ಕೆ ಸಾಕಷ್ಟು ಆಕ್ಷೇಪ ವ್ಯಕ್ತವಾಗಿತ್ತು,ಭಾರತ ತಂಡಕ್ಕೆ ರಜತ ಪದಕ ಪಡೆಯಲು ಪ್ರಮುಖ ಪಾತ್ರವಹಿಸಿದ್ದ ಯೋಧ ಮತ್ತು ಬಾಕ್ಸಿಂಗ್ ಕೋಚ್ ಸುಬೇದಾರ್ ಸಿ.ಎ ಕುಟ್ಟಪ್ಪ, ಸೇಯ್ಲಿಂಗ್ ವಿಭಾಗದಲ್ಲಿ ಪಾಲ್ಗೊಂಡಿದ್ದ ಕೇಲಪಂಡ ಗಣಪತಿಯರನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಕೊಡವಾಮೆ ಒಕ್ಕೂಟ ಅಸಮಧಾನ ವ್ಯಕ್ತಪಡಿಸಿದ್ದು, ಗಣನೆಗೆ ತೆಗೆದುಕೊಳ್ಳುವಂತೆ ಕರ್ನಾಟಕ ರಾಜ್ಯ ಯುವಜನ ಮತ್ತು ಕಲ್ಯಾಣ ಇಲಾಖೆ ಸಚಿವ ಕೆ.ಸಿ ನಾರಾಯಣಗೌಡರಿಗೆ ಮನವಿ ಸಲ್ಲಿಸಿದೆ.

ಈ ನಡುವೆ ಮಹಿಳಾ ಹಾಕಿ ತಂಡದ ಉಪ ಕೋಚ್ ಆಗಿದ್ದ ಸುಂಟಿಕೊಪ್ಪ ಮೂಲದ ಅಂಕಿತಾ ಸುರೇಶ್ ರವರು ಭಾರತೀಯ ತಂಡಕ್ಕೆ ನೀಡಿರುವ ಶ್ರಮವನ್ನು ಶ್ಲಾಘಿಸಿದ್ದಾರೆ.

error: Content is protected !!