fbpx

ಟೆರರಿಸ್ಟ್ ಧಮನಕ್ಕೆ ಲೇಡಿ ಟೈಗರ್!

ನವದೆಹೆಲಿ.ಸೆ(01): ಇದೇ ಮೊದಲ ಬಾರಿಗೆ ಮಹಿಳಾ ಐ.ಪಿ.ಎಸ್ ಅಧಿಕಾರಿಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆಯ ಇನ್ಸ್ ಪೆಕ್ಟರ್ ಜೆನರಲ್ ಹುದ್ದೆಗೆ ಶ್ರೀನಗರ ವ್ಯಾಪ್ತಿಯಲ್ಲಿ ನೇಮಿಸಿದೆ. ಇದು ಭಯೋತ್ಪಾದಕರ ಕಾಟ ಇರುವ ಜಮ್ಮು ಕಾಶ್ಮೀರದ ಭಾಗವಾಗಿದೆ.

ಛಾರು ಸಿನ್ಹಾ 1996-ಬ್ಯಾಚ್ ತೆಲಂಗಾಣ ಕ್ಯಾಡರ್ರಿನ ಐಪಿಎಸ್ ಅಧಿಕಾರಿಈ ಹಿಂದೆ ಕೂಡ ಸವಾಲಿನ ಪರಿಸ್ಥಿತಿಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಇವರು ಸೇವೆ ಸಲ್ಲಿಸಿದ್ದು, ಬಿಹಾರದ ಸಿ.ಆರ್.ಪಿ.ಎಫ್ ಐ.ಜಿ ಆಗಿ ನಕ್ಸಲರನ್ನು ಹದ್ದುಬಸ್ತಿನಲ್ಲಿಡುವ ಸಾಹಸ ಮಾಡಿದ್ದಾರೆ. ಅಲ್ಲಿ ನಕ್ಸಲರ ವಿರುದ್ಧ ಇವರು ಹಲವಾರು ಯಶಸ್ವಿ ಕಾರ್ಯಾಚರಣೆ ನಡೆಸಿ, ಅವರ ಕಾರ್ಯ ಚಟುವಟಿಕೆಗಳಿಗೆ ಬ್ರೇಕ್ ಹಾಕಿದ್ದರು.

error: Content is protected !!