fbpx

ಟಿಬೆಟನ್ನರ ನೋವಿನ ಕತೆಯಿಂದ ನಾವೆಲ್ಲರೂ ಕಲಿಯಬೇಕಾದ್ದು..

✍️ ಕೊಚ್ಚಿ ಅನಿಂದಿತ್ ಗೌಡ,

ನಮಸ್ತೆ ಸ್ನೇಹಿತರೆ. ನಮ್ಮ ದೇಶದ ಗಡಿಭಾಗದಲ್ಲಿ ಯಾವಾಗಲಾದರೂ ಒಮ್ಮೆ ಬಂದು ಸಮಸ್ಯೆಗಳನ್ನು ಉಂಟುಮಾಡುವುದು ಚೀನಾದ ಕಮ್ಯೂನಿಸ್ಟರ ಚಟ. ಈ ಕಮ್ಮಿನಿಷ್ಠೆ ಚೀನಾವು ಈಚೆ ಭಾರತಕ್ಕೆ ಆಗಾಗ ಕಿರಿಕ್ ಮಾಡಿದ್ರೆ, ಆಚೆ ದಕ್ಷಿಣ ಚೀನೀ ಸಮುದ್ರದಲ್ಲಿ, ಹಾಂಗ್ ಕಾಂಗ್ ಗೆ, ತಯ್ವಾನ್ ಪ್ರದೇಶಕ್ಕೆ,
ಮಂಗೋಲಿಯಾದ ಭಾಗಕ್ಕೂ ಹಲವು ಸಮಸ್ಯೆಗಳನ್ನು ಉಂಟುಮಾಡಿದ್ದು ದಾಖಲೀಕರಣವಾದ ವಿಷಯಗಳು.

ಸುಮ್ಮನೆ ಈ ಸಮಸ್ಯೆಗಳ ಲಿಸ್ಟ್ ಅನ್ನು ಮಾಡುವ ಪ್ರಯತ್ನವಲ್ಲ. ಇದನ್ನು ತಿಳಿಸುವುದು ಅತ್ಯವಶ್ಯಕ ಎಂದೆನಿಸುತ್ತದೆ, ಏಕೆಂದರೆ ನಿಮಗೆ ಈ ಬರವಣಿಗೆಯ ಮುಖಾಂತರ ಒಂದು ಗಂಭೀರವಾದ ಘಟನೆ ಹಾಗೂ ಅದರ ಪರಿಣಾಮದ ಬಗ್ಗೆ ತಿಳಿಸಲು ಇಚ್ಚಿಸುತ್ತೇನೆ.

ಹುಟ್ಟೂರು ಬಿಟ್ಟು ತೊಲಗುವಂತ ಪರಿಸ್ಥಿತಿ ಎದುರಾದಂತ ಅನೇಕ ಕತೆಗಳನ್ನು ಬಹುಶಃ ನಾವೆಲ್ಲರೂ ಕೇಳಿದ್ದೇವೆ.

ಅಯೋಧ್ಯೆಯ ಶ್ರೀ ರಾಮಚಂದ್ರ, ಅವರ ಪತ್ನಿ ಸೀತಾಮಾತೆ ಹಾಗೂ ತಮ್ಮ ಲಕ್ಷ್ಮಣ, ಏನನ್ನು ಅನುಭವಿಸಿದರು ಎಂಬುದರ ಬಗ್ಗೆ ನಾವೆಲ್ಲರೂ ತಿಳಿದಿದ್ದೇವೆ. ಇದರಿಂದ ನಾವೆಲ್ಲರೂ ಕಲಿಯಬೇಕಾದ ಜೀವನದ ಅತ್ಯವಶ್ಯಕ ಪಾಠಗಳು ಬಹಳಷ್ಟು ಇದೆ.

ಬಹುಷಃ ನಮಗಿರುವ ಅನುಕೂಲದಿಂದ, ಅಂತಹ ಅನುಭವವು (ಅಂದರೆ, ತಮ್ಮ ಊರನ್ನೇ ಬಿಡಬೇಕಾದ ಪರಿಸ್ಥಿತಿ, a painful departure) ಯಾರೊಬ್ಬರದ್ದೂ ಆಗಬಾರದು ಎಂದು ಆಶಿಸಬಹುದೋ, ಏನೋ. ಆದರೆ ನಡೆದುಹೋದಂತ ಅದೆಷ್ಟೋ ಅಂತ ಘಟನೆಗಳು ಮತ್ತು ಅದರ ಪರಿಣಾಮಗಳನ್ನು ನಾವು ಮರೆಯುವಂತಿಲ್ಲ. ಯಾಕೆಂದರೆ, Geopolitics ದ್ರಷ್ಟಿಯಿಂದ ನೋಡುವಾಗ ಯಾವುದೇ ಸರ್ಕಾರವಾಗಲಿ, ನೀತಿಗಳನ್ನು ರಚಿಸುವಾಗ ಇಂತಹಾ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.

ನಾವೀಗ 1959 ಇಸವಿಯಲ್ಲಿ ನಡೆದ ಘಟನೆಯ ಬಗ್ಗೆ ತಿಳಿದುಕೊಳ್ಳೋಣ. ಅಂದಿನ ವರೆಗೆ ನಮ್ಮ ಸುದೀರ್ಘವಾದ ನೆರೆಯ ಮಿತ್ರ ರಾಷ್ಟ್ರವಾಗಿದ್ದ (ಹಾಗೆಯೇ ಸಾಂಸ್ಕೃತಿಕ ವಿಚಾರಗಳಲ್ಲಿ ಪ್ರಾಚೀನ ಕಾಲದಿಂದಲೂ ಸಂಬಂಧವನ್ನು ಹೊಂದಿದ್ದ ಪ್ರದೇಶ)
ಟಿಬೇಟ್ ಹಾಗೂ ಅಲ್ಲಿನ ಜನರು ಅನುಭವಿಸಬೇಕಾದ ಅನ್ಯಾಯದ ಕಹಿನೆನಪು ಹಾಗೂ ಅದರ ಪರಿಣಾಮವನ್ನು ತಿಳಿಸುವಲ್ಲಿ ನನ್ನದೊಂದು ಪ್ರಯತ್ನವಷ್ಟೇ.

ಪ್ರಪಂಚಕ್ಕೆ ಶಾಂತಿಯ ಪಾಠ ಹೇಳಿಕೊಡುವ ಬೌದ್ಧಧರ್ಮದ ಅನುಯಾಯಿಗಳು ಅನುಭವಿಸಬೇಕಾಯಿತು ನೋವನ್ನು. ಏಕೆಂದರೆ ಚೀನಾದ ಕಮ್ಯುನಿಸ್ಟರು ಇವರನ್ನು ಅಡಚಣೆಯಾಗಿ ಭಾವಿಸಿದರು. ಯಾವುದರಲ್ಲಿ ಎಂದರೆ, ಕಮ್ಯೂನಿಸ್ಟರ ವಿಸ್ತರಣಾ ಯೋಜನೆಯಲ್ಲಿ !

ಇಂತಹಾ ವಿಷಪೂರಿತ ಚಿಂತನೆಯು ಚೀನಾವನ್ನೇ ಅದರ ಮೂಲ ಪುರಾತನ ಸಂಸ್ಕೃತಿಯಿಂದ ಪ್ರತ್ಯೇಕ ಮಾಡುವುದರಲ್ಲಿ ಯಶಸ್ವಿ ಆಗಿದೆ. ಇಂದು ನಾವು ಚೀನಾ ಎಂದು ಯಾವುದನ್ನು ಭೂಪಟದಲ್ಲಿ ನೋಡುತ್ತೇವೋ, ಅದು ನಿಜವಾದ ಚೀನಾ ಅಲ್ಲ, ಬದಲಿಗೆ ತನ್ನ ನೆರೆಯ ರಾಷ್ಟ್ರಗಳನ್ನು ನುಂಗಿಕೊಂಡು ತನ್ನ ಗಾತ್ರವನ್ನು ದಿನೇ ದಿನೇ ಹೆಚ್ಚಿಸಿಕೊಳ್ಳುವ ಪುಂಡನನ್ನು.

ಹಾಂಕಾಂಗ್, ತಯ್ವಾನ್, ಮಂಗೋಲಿಯಾ, ಟಿಬೇಟ್, ಭಾರತ, ನೇಪಾಳ, ಇವೆಲ್ಲಾ ಸದ್ಯಕ್ಕೆ ಭೂಭಾಗದಲ್ಲಿ ಸಮಸ್ಯೆಯನ್ನು ಎದುರಿಸುತ್ತಿರುವ ರಾಷ್ಟ್ರಗಳಾದರೆ, ಶ್ರೀ ಲಂಕಾ, ಆಫ್ರಿಕಾ ದಂತೆ ದೂರವಿರುವ ರಾಷ್ಟ್ರಗಳು ಸಾಲವನ್ನು ತೀರಿಸಲಾಗದೆ, ಬರುವ 99 ವರ್ಷಕ್ಕೆ ತಮ್ಮ ಒಂದು ಬಂದರನ್ನು ಗುತ್ತಿಗೆಗೆ ಪಡೆದುಕೊಂಡಿದೆ, ಅದೇ ಚೀನಾ (ಇದು ಶ್ರೀ ಲಂಕಾ ಅನುಭವಿಸುತ್ತಿದೆ) !

ಟಿಬೇಟನ್ನರ ಕತೆಯನ್ನು ಕೇಳಿದಾಗ ಬಹಳ ದುಃಖವಾಗುತ್ತದೆ.

ಟಿಬೆಟಿಯನ್ ಧರ್ಮ ಗುರು – ದಲಾಯಿ ಲಾಮಾ (His Holiness, The Dalai Lama) ರವರು ತಮ್ಮ ಆತ್ಮಚರಿತ್ರೆಯಲ್ಲಿ ಟಿಬೆಟ್ ರಾಜ್ಯದ ಸಮೃದ್ಧತೆಯ ಬಗ್ಗೆ (ವಿದೇಶಿ ಸರಕುಗಳು ಲಭ್ಯತೆ), ಅಲ್ಲಿನ ಅರಮನೆಗಳು, ಅನನ್ಯ ಸಾಂಸ್ಕೃತಿ ಹಾಗೂ ಭಾಷೆಯ ಬಗ್ಗೆ ಬರೆದಿರುತ್ತಾರೆ. ನಿದಾನವಾಗಿ ಚೀನಾದ ಕಮ್ಯೂನಿಸ್ಟರು ತಮ್ಮ ಮಿಲಿಟರಿ ಶಕ್ತಿಯಲ್ಲಿ ಬೆಳೆಯುತ್ತಾರೆ ಹಾಗೂ ಟಿಬೆಟ್ ಗಡಿ ಹತ್ತಿರ ಬಂದು ಅದನ್ನು ಸಾಮ್ರಾಜ್ಯಶಾಹಿಯಿಂದ ಬಿಡುಗಡೆಗೊಳಿಸಿರುವುದಾಗಿ ಕಾರಣವನ್ನು (Propaganda) ಹೇಳಲು ಪ್ರಾರಂಭಿಸಿದರು. ಅನೇಕ ಬಾರಿ ಧರ್ಮ ಗುರುಗಳು ಮಾತುಕತೆ ಮಾಡಲೆಂದು
ಇತರೆಡೆಗೆ ಅಧಿಕಾರಿಗಳನ್ನು ಕಳಿಸುತ್ತಾರೆ, ಆದರೆ ಅದು ಯಾವುದು ಯಶಸ್ವಿ ಆಗಲಿಲ್ಲ (ಅವರು ಶಾಂತಿಯುತ ಪ್ರಯತ್ನಗಳಿಗೆ ಅವರಿಗೆ ನೋಬೆಲ್ ಪ್ರಶಸ್ತಿ ಕೂಡ ದೊರಕಿದೆ). ಕಡೆಗೊಂದು ದಿನ ಅವರೇ ಬರಬೇಕೆಂದು ಕಮ್ಯೂನಿಸ್ಟರು ಹಟ ಹಿಡಿಯುತ್ತಾರೆ, ಅದು ಕೂಡ ಯಾವುದೇ ಶಸ್ತ್ರಾಸ್ತ್ರಗಳಿಲ್ಲದ ಸಿಪಾಯಿಗಳೊಂದಿಗೆ ಬಂದು ಒಬ್ಬರೇ ಮಾತನಾಡಬೇಕೆಂದು ಶರತ್ತು ಒಡ್ಡುತ್ತಾರೆ !

ಆಗಿನ ಅಲ್ಲಿನ ನಿವಾಸಿಗಳು ತಮ್ಮ ಯುವ ನಾಯಕನಿಗೆ ಎದುರಾಗಬಹುದಾದ ಅಪಾಯಗಳನ್ನು ಅರಿತು, ನಾಯಕನು ಅಲ್ಲಿಂದ ತೆರಳಬಾರದೆಂದು ಅರಮನೆಯ ಎದುರುಗಡೆ ಅಡ್ಡ ತಡೆಯುತ್ತಾರೆ. ಪ್ರೊಪೆಸೀ (Prophecy) ಮೂಲಕವೂ ಅಪಾಯ ತಪ್ಪಿದ್ದಲ್ಲ ಎಂದು ತಿಳಿಯುತ್ತಾರೆ, ಧರ್ಮ ಗುರುಗಳು. ಕೊನೆಗೆ ಮಾಮೂಲಿ ಸೈನಿಕರಂತೆ ತನ್ನ ಗುರುತನ್ನು ಬದಲಾಯಿಸುವ ಮೂಲಕ, ಅರಮನೆಯಿಂದ ಹೊರಬಂದು, ಕಡೆಗೆ ಮ್ಯೂಲ್ (ಗಂಡು ಕತ್ತೆ ಮತ್ತು ಹೆಣ್ಣು ಕುದುರೆಯ crossbreed) ಎಂಬ ಪ್ರಾಣಿಯ ಬೆನ್ನೇರಿ ಕಡೇಪಕ್ಷ ತನ್ನ ಊರಿನ ನೋಟವನ್ನು ಬೆಟ್ಟದಿಂದ ನೋಡಿ ತಮ್ಮ ಊರನ್ನೇ ಬಿಟ್ಟು ಭಾರತಕ್ಕೆ ಬರುತ್ತಾರೆ. ಇದು ನಡೆದದ್ದು ಮಾರ್ಚ್ 1959 ಇಸವಿಯಲ್ಲಿ.

ಭಾರತದಲ್ಲೇ ಆಶ್ರಯ ಪಡೆದು, Government in Exile ಸ್ಥಾಪಿಸಿ ಭಾರತೀಯರೊಂದಿಗೆ ಸಾಮರಸ್ಯದಿಂದ ಜೀವಿಸುತ್ತಾಬಂದಿದ್ದಾರೆ ಇವರು.

ಇತ್ತೀಚಿನ ವರ್ಷಗಳಲ್ಲಿ, “ವಸುಧೈವ ಕುಟುಂಬಕಮ್” ಚಿಂತನೆಯ ಅನುಷ್ಠಾನದ ಒಂದು ಉದಾಹರಣೆಯೆಂದರೆ ಈ ಘಟನೆ ಎಂಬುದು ತಪ್ಪಾಗಲಾರದು. ಭಾರತವು ಸ್ವಾತಂತ್ರ್ಯವನ್ನು ಸಾಧಿಸಿದ ಸ್ವಲ್ಪ ಸಮಯದಲ್ಲೇ ಅನ್ಯಾಯವನ್ನು ಎದುರಿಸುತ್ತಿರುವವರಿಗೆ ಆಶ್ರಯ ನೀಡಿತು.

ನಮ್ಮಲ್ಲಿ ಬಹಳಷ್ಟು ಮಂದಿಗೆ ಟಿಬೆಟ್ ನಲ್ಲಿ ಕಂಡುಬರುವ ಅನನ್ಯ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ಟಿಬೆಟಿಯನ್ ನಿರಾಶ್ರಿತರು ಕರಕುಶಲ ವಸ್ತುಗಳನ್ನು ತಯಾರಿಸುತ್ತಾರೆ ಮತ್ತು ಮಾರಾಟ ಮಾಡುತ್ತಾರೆ. ಇದನ್ನು ಖರೀದಿಸಿದರೆ ನಾವು ಅವರಿಗೆ ಸಹಾಯಮಾಡಿದಹಾಗೆ. ಕರ್ನಾಟಕದ ಮುಂಡಗೋಡು ಹಾಗೂ ಬಯ್ಲಕುಪ್ಪೆಯಲ್ಲೂ ಇವರ settlement ಇವೆ.

ಯಾಕೆ ಇವರ ಬಗ್ಗೆ ಬರೆಯಲು ಮನಸಾಯಿತೆಂದರೆ, ಕೆಲ ದಿನಗಳ ಹಿಂದೆ T.V. ನಲ್ಲಿ ಟಿಬೆಟಿನ ಅಧ್ಯಕ್ಷರ – ಲೋಬ್ಸಾಂಗ್ ಸಾಂಗೇಯ್ (Lobsang Sangay, President of The Tibetan Government in Exile) ಅವರ ಸಂದರ್ಶನ ನಡೆಯುತ್ತಿತ್ತು. ಸಂದರ್ಶನದಲ್ಲಿ ಅವರೊಂದು ಬಹಳ ಮುಖ್ಯವಾದ ಸತ್ಯವನ್ನು ಎದುರಿಟ್ಟರು. ಅದು ಏನೆಂದರೆ, ನಮ್ಮ ಭಾರತದ (ಅಂದರೆ, ಟಿಬೇಟನ್ನರ ಎರಡನೇ ಮನೆ) ಗಡಿಯನ್ನು ಕಾಯುತ್ತಾ ಅದೆಷ್ಟೋ ಯೋಧರು ಹುತಾತ್ಮರಾಗಿದ್ದಾರೆ‌. ಮೊನ್ನೆಯಷ್ಟೇ ಗಡಿಯಲ್ಲಾದ ಚೀನಿ ಗೂಂಡಾಗಿರಿಯಿಂದಾಗಿ ನಮ್ಮ ಯೋಧರು ಹುತಾತ್ಮರಾದರು (ಅದಕ್ಕೆ ತಕ್ಕ ಉತ್ತರವನ್ನು ನಮ್ಮ ಸೇನೆ, ಆಡಳಿತ ನೇತ್ರತ್ವ ಹಾಗೂ ನಾಗರೀಕರು ನೀಡಿದ್ದಾರೆ). ನಾವೆಲ್ಲರೂ ಇದನ್ನು ಭಾರತದ LAC (Line of Actual Control) ಎನ್ನುವುದು ಎಷ್ಟು ಸತ್ಯವೋ, ಆಚೆಗೆ ಅದು ಚೀನೀಯರ ಗಡಿ ಎನ್ನುವುದೇ ದೊಡ್ಡ ತಪ್ಪು !

ಒಂದುವೇಳೆ ನಾವು ಹಾಗೆ ಹೇಳಿದರೆ, ಚೀನಾಕ್ಕೆ ನಾವು legitimise ಮಾಡುವಲ್ಲಿ ಸಹಕಾರಿಯಾಗುವಂತೆ. ಹೇಗೆಂದು ವಿವರಿಸುತ್ತೇನೆ.

ಚೀನಾಕ್ಕೆ ನಿಜವಾಗಿಯೂ ಗಡಿ ಉಂಟಾದರೆ ಅದು ಟಿಬೆಟ್ ದೇಶದೊಂದಿಗೆ, ಭಾರತದೊಂದಿಗೆ ಅಲ್ಲ. ಭಾರತ ಹಾಗೂ ಚೀನಾ ನಡುವಿನ buffer zone ಅಂದರೆ ಅದು ಟಿಬೆಟ್ ರಾಷ್ಟ್ರ. ಶಾಂತಿಯುತ ಹಾಗೂ ನೈಸರ್ಗಿಕ ಮಹತ್ವದ ಪ್ರದೇಶವೆಂದರೆ ಅದೇ ಟಿಬೆಟ್.

ಟಿಬೆಟ್ ಪ್ರದೇಶದಲ್ಲಿ ಚೀನಾದ ವಿನಾಶಕಾರಿ ನಡವಳಿಕೆಯನ್ನು, ಸ್ವಯಂ ಘೋಷಿತ ಪರಿಸರವಾದಿಗಳು ಏಕೆ ಪ್ರಶ್ನಿಸುವುದಿಲ್ಲ ?

ಟಿಬೆಟ್ ಮೂಲದ ಹಿಮನದಿಗಳ ಕರಗುವಿಕೆಯ ಪರಿಣಾಮಗಳನ್ನು ಒಮ್ಮೆ ನೀವೇ ಊಹಿಸಿನೋಡಿ !

ಚೀನಾವು ಟಿಬೆಟನ್ನು ನುಂಗಲು ಯತ್ನಿಸಿಕೊಂಡು,
ಇತರ ರಾಷ್ಟ್ರಗಳಿಗೆ ಟಿಬೆಟ್ ಹಾಗೂ ಅದರ ಸಂಸ್ಕೃತಿಯನ್ನು ಗುರುತಿಸಲು ಅವಕಾಶ ಕೊಡದೆ (ಇದು ಚೀನಾದ ಆಂತರಿಕ ವಿಷಯವೆಂದು ಬೇರೆಯವರನ್ನು ಬೆದರಿಸಿದ ಹಲವು ಉದಾಹರಣೆಗಳು ಉಂಟು), ವಿದೇಶಿ ಮಣ್ಣಿನಿಂದ ಇತರ ರಾಷ್ಟ್ರಗಳನ್ನು ಆಕ್ರಮಿಸಲು ಪ್ರಯತ್ನಿಸುತ್ತಿದೆ. ಇಂತಹಾ ನಡವಳಿಕೆ ಎಷ್ಟು ಸರಿ ?

ಗಡಿಯಲ್ಲಿ ಶಾಂತಿಯನ್ನು ಕಾಪಾಡಲು ವಿವಿಧ ಹಂತಗಳ ಮಾತುಕತೆಗೆ ಭಾರತ ಮುಂದಾಗಿದೆ. Disengagement process ಕೂಡಾ ಪ್ರಾರಂಭವಾಗಿದೆ, ಚೀನಾದ PLA (People’s Liberation Army) LAC ಇಂದ ಹಿಂದೆ ಸಾರುತ್ತಿದೆ ಎಂಬ ವರದಿಗಳು ಬಂದಿವೆ. ಆದರೆ ನಮ್ಮ ಸೇನೆಯು ಯಾವ ಪರಿಸ್ಥಿತಿಗೂ ಸಿದ್ಧವೆಂದು ಭಾರತೀಯರು ಹೆಮ್ಮೆಯಿಂದ ಹೇಳಿಕೊಳ್ಳಬಹುದು, The Josh is always high !

2016 ರಲ್ಲಿ ಉತ್ತರ ಭಾರತದ ಪ್ರವಾಸದಲ್ಲಿದ್ದಾಗ ಹಿಮಾಚಲಪ್ರದೇಶದ ಮನಾಲಿಯ Von Ngari Monastery ಯಲ್ಲಿ ಒಂದು ಸಂಜೆಯನ್ನು ಕಳೆದಿದ್ದು ನೆನಪಾಯಿತು. ಬಹಳ ಶಾಂತಿಯುತ, ಸಕಾರಾತ್ಮಕ ಹಾಗೂ ಖುಷಿಯ ಕಂಪನಿ ಆ ಜನರದ್ದು.

4 ವರ್ಷಗಳ ನಂತರ, ಅಂದರೆ ಈ Covid-19 ಮಹಾಮಾರಿ ಆವರಿಸಿರುವ ಸಂದರ್ಭದಲ್ಲಿ ಗಡಿಯಲ್ಲಿ ಉಂಟಾದ ಪರಿಸ್ಥಿತಿ ಹಾಗೂ T.V. ಸಂದರ್ಶನವನ್ನು ನೋಡುವಾಗ ಆ ಸಂಜೆಯ ನೆನಪಾಯಿತು.

ಒಬ್ಬ ಬೌದ್ಧ ಸನ್ಯಾಸಿಯಾದ ಲಾಮಾ ಲೋಬ್ಸಾಂಗ್ ಅವರೊಂದಿಗೆ ಇಷ್ಟೆಲ್ಲಾ ವಿಚಾರಗಳನ್ನು ಪೋನ್ ಮುಖಾಂತರ ಮಾತನಾಡುತ್ತಿರುವಾಗ ಹೇಳಿದರು, “ಕರ್ನಾಟಕ ಕೇ ಲೋಗ್ ಹಮಾರೆ ಗುಡ್ ಫ್ರೆಂಡ್ಸ್ ಹೈ” ಅಂತಾ (ಕರ್ಣಾಟಕದ ನಿಜಲಿಂಗಪ್ಪನವರ ಸಹಾಯದ ನೆನಪುಗಳು).

ಈ “ಫ್ರೆಂಡ್ಶಿಪ್” ಅನ್ನು ಉಳಿಸಿಕೊಳ್ಳುವಲ್ಲಿ ನನ್ನದೊಂದು ಪುಟ್ಟ ಪ್ರಯತ್ನ. ಟಿಬೆಟನ್ನರಿಗೆ ನ್ಯಾಯ ಸಿಗಲಿ, ಹಾಗೆಯೇ ಭಾರತ – ಟಿಬೆಟ್ ಸಂಬಂಧವು ಇನ್ನಷ್ಟು ಬೆಳೆಯಲೆಂದು ಆಶಿಸುತ್ತೇನೆ.

ಜೈ ಹಿಂದ್ 🇮🇳


✍️ ಕೊಚ್ಚಿ ಅನಿಂದಿತ್ ಗೌಡ

error: Content is protected !!