ಟಿಪ್ಪು ಮೈಸೂರಿನ ಹುಲಿ ಅಲ್ಲ,ಇಲಿ: ಶಾಸಕ ಅಪಚ್ಚು ರಂಜನ್

ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಟಿಪ್ಪುವಿನ ಜಯಂತಿ ಆಚರಿಸುವ ಮೂಲಕ ಕೊಡಗಿನವರ ಸಿಟ್ಟು ದುಪಟ್ಟು ಮಾಡಿಯಾಗಿದೆ, ಕೊಡವರು ಮತ್ತು ಕ್ರೈಸ್ತರ ಮತಾಂತರ ಮಾಡುವುದರ ಜೊತೆಗೆ ದೇವಾಲಯ, ಚರ್ಚ್ ಲೂಟಿ ಮಾಡಿದಲ್ಲದೆ ಧ್ವಂಸ ಮಾಡಿದ್ದು 30 ಬಾರಿ ದಂಡೆತ್ತಿ ಬಂದ ಟಿಪ್ಪುಕೊಡಗಿನವರನ್ನೇ ಗೆಲ್ಲಲು ಸಾಧ್ಯವಾಗದೆ ಮತಾಂತರ ಜೊತೆಗೆ 31 ನೇ ಬಾರಿ ಬಂದು 10 ಸಾವಿರ ಮಂದಿ ಕೊಡಗಿನವರ ಮಾರಣಹೋಮಕ್ಕೆ ಭಾಗಮಂಡಲ ಸಮೀಪದ ದೇವಟೀಪರಂಬು ಸಾಕ್ಷಿಯಾಗಿದೆ. ಹಾಗಾಗಿ ಆತನ ಬಗ್ಗೆ ವೈಭವೀಕರಣ ಬೇಡ ಆತನ ಬಗ್ಗೆ ಮಾಹಿತಿಯ ಸತ್ಯಾಸತ್ಯತೆ ಇರುವುದರ ಪುಸ್ತಕಗಳನ್ನು ಶಿಕ್ಷಣ ಸಚಿವ ನಾಗೇಶ್ ರಿಗೆ ನೀಡಲಾಗಿದೆ ವಿಧಾನಸಭೆಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.