fbpx

ಟಾಟಾ ಮೋಟಸ್೯ ಭಾರತದಲ್ಲಿ ಮಹತ್ವದ ಸಾಧನೆ

ಮುಂಬೈ: ಸಂಸ್ಥೆ ಹುಟ್ಟಿ ಮೂರೇ ದಶಕಗಳಲ್ಲಿ ಟಾಟಾ ಮೋಟಾರ್ಸ್‌ 40 ಲಕ್ಷ ಪ್ರಯಾಣಿಕ ಕಾರುಗಳನ್ನು ಉತ್ಪಾದಿಸುವ ಮೂಲಕ ಭಾರತದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ.

1991ರ ಟಾಟಾ ಸಿಯೆರ್ರಾ ಮೂಲಕ ಟಾಟಾ ಮೋಟಾರ್ಸ್‌ ಕಾರು ಉತ್ಪಾದನೆ ಆರಂಭಿಸಿತ್ತು. 2005-06ರ ಹೊತ್ತಿಗೆ 10 ಲಕ್ಷ ಕಾರು, 2015ರ ವೇಳೆಗೆ 30 ಲಕ್ಷ ಕಾರುಗಳನ್ನು ಉತ್ಪಾದಿಸಿತ್ತು. 2020ರ ಸೆಪ್ಟೆಂಬರ್‌ಗೆ ಒಟ್ಟು ಕಾರು ಉತ್ಪಾದನೆ 40 ಲಕ್ಷ ತಲುಪಿದೆ ಎಂದು ಸಂಸ್ಥೆ ತಿಳಿಸಿದೆ.

“ಟಾಟಾ ಮೋಟಾರ್ಸ್‌ ಪಾಲಿಗೆ ಇದು ಅತ್ಯಂತ ಗಮನಾರ್ಹ ಮೈಲುಗಲ್ಲು. ಇಂಥ ಸಾಧನೆಯನ್ನು ಕೆಲವೇ ಕೆಲವು ಮೋಟಾರ್‌ ಉದ್ಯಮಗಳಷ್ಟೇ ಪೂರೈಸಿವೆ’ ಎಂದು ಟಾಟಾ ಮೋಟಾರ್ಸ್‌ ಅಧ್ಯಕ್ಷ ಶೈಲೇಶ್‌ ಚಂದ್ರ ತಿಳಿಸಿದ್ದಾರೆ.

ಈ 3 ದಶಕಗಳಲ್ಲಿ ಸಂಸ್ಥೆ ಇಂಡಿಕಾ, ಸಿಯೆರ್ರಾ, ಸುಮೋ, ಸಫಾರಿ ಮತ್ತು ನ್ಯಾನೊ ಕಾರುಗಳನ್ನು ಉತ್ಪಾದಿಸಿ ಮಧ್ಯಮವರ್ಗದ ಸ್ನೇಹಿಯಾಗಿದೆ.

error: Content is protected !!