ಜ್ಞಾನ ಹಾಗು ವ್ಯಕ್ತಿತ್ವ ವಿಕಸನ ವಿದ್ಯಾರ್ಥಿಗಳಿಗೆ ಅತ್ಯಗತ್ಯ: ಅನಿತಾ ಪೂವಯ್ಯ

ವಿದ್ಯಾರ್ಥಿಗಳಿಗೆ ಜ್ಞಾನ ಮತ್ತು ವ್ಯಕ್ತಿತ್ವ ವಿಕಸನ ಅತ್ಯಗತ್ಯ ಎಂದು ಮಡಿಕೇರಿ ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಹೇಳಿದರು. ನಗರಸಭೆಯ ಹಿಂದೂಸ್ತಾನಿ ಸರಕಾರಿ ಹಿರಿಯ ಪ್ರಾ ಥಮಿಕ ಶಾಲೆಯಲ್ಲಿ, ಮಡಿಕೇರಿಯ ಪ್ರಥಮ ದರ್ಜೆ ಕಾಲೇಜು ಹಮ್ಮಿಕೊಂಡಿರುವ ವಾರ್ಷಿಕ ರಾಷ್ಟ್ರೀಯ ಸೇವಾ ಯೋಜನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಯುವ ಶಕ್ತಿ ಈ ದೇಶವನ್ನು ಕಟ್ಟುವ ಕೆಲಸ ಮಾಡಬೇಕು. ಯಾವ ಹಿಂಜರಿತ ಇಲ್ಲದೆ ಸ್ವಾಮಿ ವಿವೇಕಾನಂದರ ತತ್ವ – ಸಿದ್ದಾಂತಗಳನ್ನು ಪಾಲಿಸಿ, ಸದೃಢ ಮತ್ತು ಸಮೃದ್ಧ ದೇಶವನ್ನು ಕಟ್ಟಲು ಶ್ರಮಿಸಬೇಕೆಂದು ಶಿಬಿರಾರ್ಥಿಗಳಿಗೆ ತಿಳಿ ಹೇಳಿದರು.
ಶಿಬಿರದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಡಿ. ನಿರ್ಮಲ ಅವರು ಮಾತನಾಡಿ, ಗಾಂಧಿಜೀ ಕಂಡ ಕನಸನ್ನು ಯುವಜನತೆ ನನಸು ಮಾಡಬೇಕು.. ರಾಷ್ಟ್ರೀಯ ಸೇವಾ ಯೋಜನೆಯ ಮೂಲ ಗುರಿಯಾದ ಗ್ರಾಮಗಳ ಉದ್ಧಾರಕ್ಕಾಗಿ , ನಾವೆಲ್ಲರೂ ಏಕತೆ ಮತ್ತು ಸಹಬಾಳ್ವೆಯಿಂದ ಅತ್ಮಸ್ಥೆರ್ಯದೊಂದಿಗೆ ಮುನ್ನಡೆಯು ಕೆಲಸವಾಗಬೇಕೆಂದರು.
ಕಾಲೇಜಿನ ಪ್ರೊ. ಬಿ. ಆರ್ ಶಶಿಧರ್ ಅವರು ಪ್ರಸ್ತಾವಿಕ ನುಡಿಯನ್ನಾಡಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಎವರೆಸ್ಟ್ ರೋಡ್ರಿಗಸ್ ಸ್ವಾಗತಿಸಿದರು, ಶಿಬಿರಾಧಿಕಾರಿಗಳಾದ ಪ್ರೋ. ಎಂ.ಎನ್ ಪ್ರಕಾಶ್ ವಂದಿಸಿದರು. ಪ್ರೋ. ಎನ್ ನಂಜುಂಡ ಸ್ವಾಮಿ ಕಾರ್ಯಕ್ರಮ ನಿರೂಪಣೆ ಮಾಡಿದರು.ವೇದಿಕೆಯಲ್ಲಿ ಮಡಿಕೇರಿ ನಗರಸಭೆ ಸದಸ್ಯರಾದ ಬಿ.ಪಿ ಚಿತ್ರಾವತಿ, ಹಿಂದುಸ್ತಾನಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಸರೋಜಿನಿ, ರಾ.ಸೇ.ಯೋ ಶಿಬಿರದ ನಾಯಕಿ ಕೆ.ಎನ್. ವರಿಷ್ಠ, ನಾಯಕನಾದ ಕೆ.ಪಿ.ಸಜನ್ ಇದ್ದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.