ಜೋಳದ ರೊಟ್ಟಿಯ ಆರೋಗ್ಯಕರ ಅಂಶಗಳು!

ಬಹುತೇಕ ಜನರಿಗೆ ಗೋಧಿ ಹಿಟ್ಟಿನಿಂದ ಮಾಡಿದ ಪೂರಿ, ಚಪಾತಿ, ಪರೋಟ ಗೊತ್ತಿರುತ್ತದೆ. ಇವುಗಳನ್ನು ಹೊರತುಪಡಿಸಿ ಕೆಲವು ಸ್ವಾದಿಷ್ಟ ರೊಟ್ಟಿಗಳಿವೆ. ಅದುವೇ ಜೋಳದ ರೊಟ್ಟಿ. ಕಡಿಮೆ ಉರಿಯಲ್ಲಿ ಸುಟ್ಟು ಮಾಡಲಾಗುವ ಈ ರೊಟ್ಟಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಪ್ರತಿದಿನ ಇದನ್ನು ಸೇವಿಸಲು ಸಾಧ್ಯವಾಗದಿದ್ದರೆ, ವಾರದಲ್ಲಿ ಕನಿಷ್ಠ ಎರಡು ಅಥವಾ ಮೂರು ಬಾರಿಯಾದರೂ ಆಹಾರದಲ್ಲಿ ಜೋಳದ ರೊಟ್ಟಿ ಇದ್ದರೆ ಆರೋಗ್ಯ ಕೂಡ ನಿಮ್ಮ ಜೊತೆಯಲ್ಲಿರುತ್ತದೆ.

ಜೋಳದಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ ಅತ್ಯಧಿಕವಾಗಿದೆ. ಆದ್ದರಿಂದ ಇದರಿಂದ ಮಾಡಿದ ಆಹಾರಗಳನ್ನು ತಿಂದ ತಕ್ಷಣ ದೇಹಕ್ಕೆ ಶಕ್ತಿ ಬರುತ್ತದೆ. ಇದನ್ನು ಸ್ವಲ್ಪ ಪ್ರಮಾಣದಲ್ಲಿ ತಿಂದರೂ ಹೊಟ್ಟೆ ತುಂಬುತ್ತದೆ. ಇದರಲ್ಲಿರುವ ಅಮಿನೋ ಆಮ್ಲ ದೇಹಕ್ಕೆ ಹೆಚ್ಚು ಪ್ರೋಟೀನ್ ಅನ್ನು ಒದಗಿಸುತ್ತದೆ.

ಜೋಳದಲ್ಲಿ ನಾರಿನಂಶವು ಅಧಿಕವಾಗಿದೆ. ಆದ್ದರಿಂದ ಇದರಿಂದ ಮಾಡಲಾಗುವ ಎಲ್ಲಾ ಆಹಾರಗಳು ಬೇಗನೆ ಜೀರ್ಣವಾಗುತ್ತವೆ.

ಗೋಧಿಯಿಂದ ಮಾಡಿದ ತಿನಿಸುಗಳಿಗಿಂತ ಜೋಳದಿಂದ ಮಾಡಿದ ತಿನಿಸುಗಳು ತುಂಬಾ ಸುಲಭವಾಗಿ ಮತ್ತು ಬೇಗನೆ ಜೀರ್ಣವಾಗುತ್ತದೆ. ಮಲಬದ್ಧತೆಯ ಸಮಸ್ಯೆ ಇರುವವರು ಪ್ರತಿದಿನ ಜೋಳದ ರೊಟ್ಟಿಯನ್ನು ಸೇವಿಸುವ ಅಭ್ಯಾಸ ಮಾಡಿಕೊಂಡರೆ ತುಂಬಾ ಒಳ್ಳೆಯದು. ಇದರಲ್ಲಿರುವ ಪೌಷ್ಟಿಕಾಂಶಗಳು ಮೂತ್ರಕೋಶದಲ್ಲಿ ಹರಳು ಕಟ್ಟಿಕೊಳ್ಳುವ ಸಮಸ್ಯೆ ಬಾರದಂತೆ ತಡೆಯುತ್ತದೆ.

ಜೋಳದಲ್ಲಿರುವ ನಿಯಾಸಿನ್ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಹಾಗೂ ಇದರಲ್ಲಿರುವ ಪೈಟೋ ಪೌಷ್ಟಿಕಾಂಶ ಹೃದಯದ ತೊಂದರೆಗಳನ್ನು ದೂರವಿಡುತ್ತದೆ. ಇದರಲ್ಲಿರುವ ಪೊಟ್ಯಾಷಿಯಂ, ಮೆಗ್ನೀಷಿಯಂ ಮತ್ತು ಖನಿಜಾಂಶಗಳು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ರೊಟ್ಟಿಯನ್ನು ಬೆಂಕಿಯಲ್ಲಿ ಸುಟ್ಟು ಮಾಡುವ ಕಾರಣ ಇದರಲ್ಲಿ ಕಬ್ಬಿಣಾಂಶವು ಹೆಚ್ಚಿರುತ್ತದೆ. ಆದ್ದರಿಂದ ರಕ್ತಹೀನತೆಯಿಂದ ಬಳಲುವವರಿಗೆ ಇದು ಉತ್ತಮ.

ಮಹಿಳೆಯರು ಋತುಬಂಧ ಸಮಯಕ್ಕಿಂತ ಮೊದಲು ಜೋಳದ ರೊಟ್ಟಿ ಅಥವಾ ಅದರಿಂದ ಮಾಡಿದ ಆಹಾರಗಳನ್ನು ಸೇವಿಸಿದರೆ ಹಾರ್ಮೋನ್ ಗಳ ಅಸಮತೋಲನವನ್ನು ತಡೆಯಬಹುದು. ಜೋಳದಿಂದ ಮಾಡಿದ ಆಹಾರಗಳನ್ನು ಸೇವಿಸಿದರೆ ಸ್ತನ ಕ್ಯಾನ್ಸರ್ ಕೂಡ ತಡೆಗಟ್ಟಬಹುದು ಎಂದು ಕೆಲವು ಅಧ್ಯಯನಗಳು ಹೇಳಿವೆ.

error: Content is protected !!